ವೇಣೂರು; ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ರಿ ವೇಣೂರು ಇದರ ಸಮುದಾಯ ಭವನ ನಿರ್ಮಾಣದ ಪೂರ್ವಭಾವಿ ಸಮಾಲೋಚನಾ ಸಭೆಯು ಸಪ್ಟೆಂಬರ್ 27 ರಂದು ವೇಣೂರು ಬಿಲ್ಲವ ಸಂಘದಲ್ಲಿ ವಲಯ ಅಧ್ಯಕ್ಷರಾದ ಹರೀಶ್ ಕುಮಾರ್ ಪದ್ಮಲಕ್ಷ್ಮೀ ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಗುರುವರ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಸಂಘದ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಸ್ವಾಗತಿಸಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಸಂಜೀವ ಸುವರ್ಣ ಸಿದ್ಧಿಶ್ರೀ ಬಜಿರೆ,ನಾರಾಯಣ ಪೂಜಾರಿ ಶ್ರೀ ಗುರು ಧೋಟ,ರಮೇಶ್ ಪೂಜಾರಿ ಪಡ್ಡ್ಡಾಯಿಮಜಲು, ಲೋಕಯ ಪೂಜಾರಿ ಕಂಗಿತ್ತಿಲು, ಗೌರವಾಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಬೆಳ್ತಂಗಡಿ ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ನಿತೀಶ್ ಹೆಚ್. ನಿರ್ದೇಶಕ ವಿಶ್ವನಾಥ್ ಪೂಜಾರಿ ದಡ್ಡಲಪಲ್ಕೆ, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಗಿರೀಶ್ ಕೆ. ಎಸ್,ದೇಲಂಪುರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ್ ಚಿಗುರು, ಬಿಲ್ಲವ ಸಂಘದ ಪದಾಧಿಕಾರಿಗಳು, ನಿರ್ದೇಶಕರು,ಸಲಹೆಗಾರರು,ಗ್ರಾಮ ಪಂಚಾಯತ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿ ಗ್ರಾಮದಲ್ಲಿಯೂ ಸಮಾಜ ಬಂಧುಗಳ ಸಮಾಲೋಚನೆ ಸಭೆ ನಡೆದು ಸಮುದಾಯ ಭವನದ ರಚನೆಗೆ ಸಹಕಾರ ಯಾಚನೆಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘಕ್ಕೆ ತನ್ನ ಸ್ವಂತ ಖರ್ಚಿನಿಂದ ಬೋರ್ವೆಲ್ ಕೊರೆಸುವ ವಾಗ್ದಾನ ನೀಡಿದ ಸೌದಿ ಅರೇಬಿಯಾ ಬಿಲ್ಲವ ಸಂಘದ ಉಪಾಧ್ಯಕ್ಷರಾಗಿರುವ ಗಿರೀಶ್ ಪೂಜಾರಿ ನ್ಯೂಹಲೆಕ್ಕಿ ಮೂಡುಕೋಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು. ಜೊತೆ ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್ದಡ್ದರವರ ಧನ್ಯವಾದದೊಂದಿಗೆ ಸಭೆ ಮುಕ್ತಾಯಗೊಂಡಿತು.
ಸಂಘದ ಸಲಹೆಗಾರರಾದ ರಾಜೇಶ್ ಪೂಜಾರಿ ಮೂಡುಕೋಡಿ, ಕೊಡುಗೈದಾನಿ ನವೀನ್ ಪಚ್ಚೇರಿ, ಯುವ ಉದ್ಯಮಿಗಳಾದ ನಾರಾಯಣ ಪೂಜಾರಿ ಪೊಸಲಾಯಿ, ರಕ್ಷಿತ್ ಬಜಿರೆ, ಗ್ರಾಮ ಪಂಚಾಯತಿ ನಿಕಟಪೂರ್ವ ಸದಸ್ಯರುಗಳಾದ ಹರೀಶ್ ಪಿ.ಎಸ್ , ಸುನೀಲ್ ಬಜಿರೆ, ವೇಣೂರು CA ಬ್ಯಾಂಕ್ ನಿರ್ದೇಶಕ ಪ್ರವೀಣ್ ಪೂಜಾರಿ ಪೆರಿಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.



