ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟ ನಿಟ್ಟಡೆ ಇದರ ಸ್ವಾತಿ ಜ್ಞಾನವಿಕಾಸ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಚ್ಛತೆ ಮತ್ತು ಆರೋಗ್ಯ ಸಂರಕ್ಷಣೆ ಇದರ ಕುರಿತು ಮಾಹಿತಿ ಕಾರ್ಯಕ್ರಮವು ನಿಟ್ಟಡೆ ಸಮುದಾಯ ಭವನದಲ್ಲಿ ನಡೆಯಿತು.
ಕೊಳಲ ಅಂಗನವಾಡಿ ಕೇಂದ್ರದ ಶಿಕ್ಷಕಿ ವಸಂತಿ ಅವರು ಮಹಿಳೆಯವರ ವೈಯುಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಪೋಷಣೆ, ಶಿಕ್ಷಣ ಮತ್ತು ಮನೆಕೆಲಸದ ಜವಾಬ್ದಾರಿಗಳ ಮಧ್ಯೆ ಮಹಿಳೆಯರು ವೈಯುಕ್ತಿಕ ಕಾರ್ಯಗಳಿಗೆ ಸಮಯ ನೀಡುವುದು ಸವಾಲಿನ ಕೆಲಸವಾಗಿದೆ. ಆದರೆ ಕುಟುಂಬದ ಒಳಿತಿಗಾಗಿ ಸ್ವಚ್ಛತೆ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.
ಶ್ರೀಮತಿ ಜಾನಕಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಸಮನ್ವಯಾಧಿಕಾರಿ ಸುಗುಣ ಶೆಟ್ಟಿ, ಸಂಯೋಜಕಿ ಗುಲಾಬಿ ಕೆ. ಭಟ್, ಒಕ್ಕೂಟದ ಅಧ್ಯಕ್ಷ ಕರುಣಾಕರ, ಸೇವಾಪ್ರತಿನಿಧಿ ವನಿತಾ ಪಿ. ಉಪಸ್ಥಿತರಿದ್ದರು. ಜ್ಞಾನವಿಕಾಸ ಕೇಂದ್ರದ ಸದಸ್ಯೆ ಗೀತಾ ಸ್ವಾಗತಿಸಿ, ನಯನ ವಂದಿಸಿದರು.






