ಸುಲ್ಕೇರಿ: ರಾಜ್ಯಮಟ್ಟದ 16 ವರ್ಷ ವಯೋಮಾನದ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆ ಕ್ಯಾಂಪ್ ಗೆ ಆಯ್ಕೆಯಾಗಿದ್ದಾರೆ.
ಈಗಾಗಲೇ ತಾಲೂಕು, ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ, ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆ ಮಾಡಿದ ಇವರು ಈಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಆಯ್ಕೆಗಾಗಿ ನಡೆಸುವ ಕ್ಯಾಂಪ್ ಗೆ ಆಯ್ಕೆಯಾಗಿದ್ದಾರೆ. ಇವರು ಶ್ರೀರಾಮ ಪ್ರೌಢಶಾಲೆ ಸುಲ್ಕೇರಿ ಇಲ್ಲಿ ೧೦ನೇ ತರಗತಿ ವಿದ್ಯಾರ್ಥಿ, ಸುಲ್ಕೇರಿ ಗ್ರಾಮದ ಭಂಡಾರಗೋಳಿ ನಿವಾಸಿ ಶ್ರೀಧರ್ ಮತ್ತು ಪುಪ್ಪಾ ದಂಪತಿಯ ಪುತ್ರ.









