ವೇಣೂರು: ಇಲ್ಲಿಯ ಮೂಡುಕೋಡಿ ಗ್ರಾಮದ ಹಲೆಕ್ಕಿ ಮನೆ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಿದ್ಧ ಪೌರಾಣಿಕ ಯಕ್ಷಗಾನ ಬಯಲಾಟವು ಮಾ.24ರಂದು ಸಂಜೆ 5-30ರಿಂದ ನಡೆಯಲಿದೆ.
ಹಲೆಕ್ಕಿ ಮನೆಯ ಶ್ರೀಮತಿ ಗೌರಮ್ಮ ಸೇಸಪ್ಪ ಹೆಗ್ಡೆ, ಪ್ರಕಾಶ್ ಸುಪ್ರಿತಾ ಹೆಗ್ಡೆ ಕುಟುಂಬಸ್ಥರಿಂದ ಈ ಸೇವೆಯಾಟ ನಡೆಯಲಿದ್ದು, ಭಕ್ತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸೇವಾಕರ್ತರು ತಿಳಿಸಿದ್ದಾರೆ.





