ಬಂಟ್ವಾಳ: ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೊ.ಟೀನಾ ಡಿಕೋಸ್ತ, ಕಾರ್ಯದರ್ಶಿಯಾಗಿ ರೊ. ಪ್ರಮೀಳ ಡಿ.ಶೆಟ್ಟಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜುಲೈ 11ರಂದು ಸಂಜೆ 6:30ಕ್ಕೆ ನೇತ್ರಾವತಿ ಸಭಾಭವನ ಫಲ್ಗುಣಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದ್ದು, ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದ್ರೆ ಇಲ್ಲಿನ ಸರ್ಜನ್ ರೊ. ಪಿಹೆಚ್ಎಫ್ ಡಾ. ಹರೀಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ನ ಧರ್ಮಗುರುಗಳಾದ ಫಾ. ಎಲಿಯಾಸ್ ಡಿʼಸೋಜ, ಜಿಲ್ಲಾ 3181 ಝೋನ್ 4ರ ಅಸಿಸ್ಟಂಟ್ ಗವರ್ನರ್ ರೊ.ಪಿಹೆಚೆಫ್ ಬಿ.ಶ್ರೀಕಾಂತ್ ಕಾಮತ್, ಝೋನಲ್ ಲೆಫ್ಟಿನೆಂಟ್ ರೊ.ಮೋಹನ್ ಜಿ.ಮೂಲ್ಯ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇದರ ಕ್ಲಬ್ ಅಡ್ವೈಜರ್ ರೊ.ಪಿಹೆಚೆಫ್ ಜೆರಾಲ್ಡ್ ಡಿಕೋಸ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ಧಾರೆ.



