ಬೆಂಗಳೂರು, ಜೂ.4: ಕರಾವಳಿಯಿಂದ ಬಯಲು ಸೀಮೆಯವರೆಗೆ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಬಿಗುವಿನ ವಾತಾವರಣಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ. ರಾಜ್ಯದಲ್ಲಿ ವರುಣದೇವ ಅಬ್ಬರ ಹೆಚ್ಚಾಗಲಿದೆ. ಇಂದು ಮಧ್ಯಾಹ್ನದ ನಂತರ ಕರ್ನಾಟಕದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಣಗಿದ ಭೂಮಿಯನ್ನು ಮತ್ತೆ ತಂಪಾಗಿಸಲಿದೆ.
ಇಂದು ಬೆಳಗಿನ ಜಾವದಿಂದಲೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಶೇ. 90 ರಷ್ಟು ತೇವಾಂಶ ದಾಖಲಾಗಿದ್ದು, ವಾತಾವರಣದಲ್ಲಿ ಗರಿಷ್ಠ ತಂಪಾದ ಅನುಭವವಾಗುತ್ತಿದೆ. ನೈಋತ್ಯ ದಿಕ್ಕಿನಿಂದ ಬೀಸುತ್ತಿರುವ ತಂಗಾಳಿಯು ಮಧ್ಯಾಹ್ನದ ವೇಳೆಗೆ ತೀವ್ರಗೊಳ್ಳಲಿದ್ದು, ಪಶ್ಚಿಮ ದಿಕ್ಕಿನಿಂದ ಗಂಟೆಗೆ 14 ಮೈಲಿಗೂ ಅಧಿಕ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇದು ಮುಂಗಾರಿನ ದಟ್ಟ ಮೋಡಗಳು ರಾಜ್ಯದಲ್ಲಿ ಹೆಚ್ಚಿನ ಮಳೆಯ ನೀಡುವ ಸಾಧ್ಯತೆಗಳು ಇದೆ.
ಇನ್ನು ಬೆಳಿಗ್ಗೆಯಿಂದ ಸೂರ್ಯನ ಪ್ರಖರತೆ ಹೆಚ್ಚಾಗಲಿದ್ದು, ಗರಿಷ್ಠ ತಾಪಮಾನವು 31°C ಆಸುಪಾಸಿನಲ್ಲಿರಲಿದೆ. ಯುವಿ ಇಂಡೆಕ್ಸ್ 8 ರಷ್ಟಿರುವುದರಿಂದ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ಬೇಗೆ ಜೋರಾಗಿರಲಿದೆ. ಆದರೆ, ಸಂಜೆಯಾಗುತ್ತಿದ್ದಂತೆ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದೆ. ರಾಜ್ಯದಾದ್ಯಂತ ಶೇ. 55 ರಷ್ಟು ಮಳೆಯಾಗುವ ಭಾರಿ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ರಾತ್ರಿಯ ವೇಳೆಗೆ ತಾಪಮಾನವು 24°C ಗೆ ಇಳಿಕೆಯಾಗಲಿದ್ದು, ಮೋಡ ಕವಿದ ತಂಪಾದ ವಾತಾವರಣ ಇರಲಿದೆ.
ಮಂಗಳೂರಿನಲ್ಲಿ ಇಂದು ತೇವಾಂಶದ ಪ್ರಮಾಣ ಶೇ. 85 ಕ್ಕೂ ಅಧಿಕ ದಾಖಲಾಗಿದೆ. ಗರಿಷ್ಠ ತಾಪಮಾನ 32°C ಇರಲಿದ್ದು, ಕರಾವಳಿ ತೀರದಲ್ಲಿ ನೈಋತ್ಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ನಂತರ ಮತ್ತು ಸಂಜೆ ವೇಳೆಗೆ ನಗರದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಡಿಕೇರಿ ಸೇರಿದಂತೆ ಇಡೀ ಮಲೆನಾಡು ಭಾಗದಲ್ಲಿ ಇಂದು ಅತ್ಯಂತ ಆಹ್ಲಾದಕರ ಹಾಗೂ ತಂಪಾದ ವಾತಾವರಣವಿದೆ. ಇಲ್ಲಿನ ಗರಿಷ್ಠ ತಾಪಮಾನ 26°C ನಿಂದ 28°C ಆಸುಪಾಸಿನಲ್ಲಿದ್ದು, ಕನಿಷ್ಠ ತಾಪಮಾನ 19°C ಗೆ ಕುಸಿದಿದೆ. ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.





