ವೇಣೂರು: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾ.ಪಂ. ವ್ಯಾಪ್ತಿಯ ಪೆರಾಡಿ ಪರಿಸರದಲ್ಲಿ ಚಿರತೆ ದಾಳಿ ಮಾಡಿದೆ. ಇಂದು (ಜ. 23) ಮುಂಜಾನೆ ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಎಳೆದೊಯ್ದು ಕೊಂದು ಹಾಕಿದೆ. ಪೆರಾಡಿಯ ಬೈಲೋಡಿ ಆನಂದ ಶೆಟ್ಟಿಯವರ ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ಚಿರತೆ ಕರುವನ್ನು ಎಳೆದೊಯ್ದು ಕೊಂದು ಹಾಕಿದೆ.
ಘಟನೆಯ ವಿಚಾರ ತಿಳಿದ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮನೆಯವರಿಗೆ ಸಾಂತ್ವಾನ ನುಡಿದಿರುವ ಅಧಿಕಾರಿಗಳು ಇಲಾಖೆ ವತಿಯಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆಯಲು ನ್ಯೂಸ್ 19 ಕನ್ನಡ ವೇಣೂರು ವಲಯ ಅರಣ್ಯಾಧಿಕಾರಿಯವನ್ನು ಸಂಪರ್ಕಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದೇವೆ. ಚಿರತೆ ಓಡಾಟದ ಜಾಗವನ್ನು ಗುರುತಿಸಿ ಶೀಘ್ರ ಬೋನ್ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ರೀತಿಯ ಕಾಡುಪ್ರಾಣಿಗಳಿಂದ ಸಾಕು ಪ್ರಾಣಿಗಳಿಗೆ ಹಾನಿಯಾದರೆ ಸಾರ್ವಜನಿಕರು ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಇಲಾಖೆಯಿಂದ ಸುಮಾರು ೨೫ ಸಾವಿರದವರೆಗೂ ಪರಿಹಾರ ನೀಡಲು ಅವಕಾಶ ಇದೆ ಎಂದು ಅವರು ನ್ಯೂಸ್ 19 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.






