ಸಾಂತ್ವಾನ ನಿಧಿ ಹಸ್ತಾಂತರ, ಹಿರಿಯ ಸದಸ್ಯರುಗಳಿಗೆ ಗೌರವಾರ್ಪಣೆ
ಪೆರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗುರುವಾಯನಕೆರೆ, ನಾರಾವಿ ವಲಯ ಪೆರಾಡಿ ಕಾರ್ಯಕ್ಷೇತ್ರದ ಪಂಡಿಂಜೆಬೆಟ್ಟ ಶ್ರೀ ಧರ್ಮದೈವ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ನೇಮೋತ್ಸವ ಸಂದರ್ಭ ಪೆರಾಡಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಪೆರಾಡಿ ಬೀಡುವಿನ ಶ್ರೀಮತಿ ಸುಮಿತ್ರಾ ರಾಜೇಂದ್ರ ಜೈನ್, ಯೋಜನಾಧಿಕಾರಿ ಅಶೋಕ್ ಬಿ. ಗುರುವಾಯನಕೆರೆ, ಸದಾನಂದ ಪೂಜಾರಿ ಗುರಿಕಾರರು ದೋಲ್ದೊಟ್ಟು ಬರ್ಕೆ, ಕರುಣಾಕರ ಜೈನ್ ಹಿರಿಯ ಉಪನ್ಯಾಸಕರು ರುಡ್ ಸೆಟ್ ಸಂಸ್ಥೆ ಉಜಿರೆ, ಶ್ರೀಮತಿ ಪ್ರಮೀಳಾ ಅಧ್ಯಕ್ಷರು ಸಾ.ಶ್ರೀ ಸ.ನಾ.ಪೂಜಾ ಸಮಿತಿ ಹಾಗೂ ಲಕ್ಷ್ಮಣ ಮತ್ತು ಸದಾನಂದ ಪೂಜಾರಿ ಅಧ್ಯಕ್ಷರುಗಳು ಪ್ರ.ಬಂ.ಒಕ್ಕೂಟ ಪೆರಾಡಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಾವ್ಯ ಒಕ್ಕೂಟದ ಮೃತರಾದ ಸದಸ್ಯೆ ಶ್ರೀಮತಿ ಬೇಬಿ ರವರ ರೂ 2 ಲಕ್ಷದ ಮೈಕ್ರೋ ಬಚಾತ್ ಪಾಲಿಸಿಯ ಮರಣ ಸಾಂತ್ವನ ದ ಮೊತ್ತ ರೂಪಾಯಿ 2 ಲಕ್ಷ ಹಾಗೂ ಇದೇ ಒಕ್ಕೂಟದ ಮೃತ ಸದಸ್ಯ ಪ್ರಶಾಂತ ರವರ ರೂ. 1 ಲಕ್ಷ ಭೀಮಾ ಜ್ಯೋತಿ ಪಾಲಿಸಿಯ ಮರಣ ಸಾಂತ್ವನದ ಮೊತ್ತ ರೂ 1 ಲಕ್ಷ ದ 30 ಸಾವಿರ ರೂಪಾಯಿ ಗಳ ಮಂಜೂರಾತಿ ಪತ್ರಗಳನ್ನು ಪೆರಾಡಿ ಬೀಡುವಿನ ಮಾತೃಶ್ರೀ ಸುಮಿತ್ರಾ ಪಿ. ರಾಜೇಂದ್ರ ಜೈನ್ ವಿತರಿಸಿದರು.
ಸಭಾ ವೇದಿಕೆಯ ಗಣ್ಯರುಗಳು ರವರಿಂದ ಪೆರಾಡಿ ಒಕ್ಕೂಟದ ೬೪ ವರ್ಷ ಮೇಲ್ಪಟ್ಟ ಹಿರಿಯ ಸದಸ್ಯ/ಸದಸ್ಯೆ ರವರನ್ನು ಸನ್ಮಾನಿಸಲಾಯಿತು.
ನಾರಾವಿ ವಲಯ ಮೇಲ್ವಿಚಾರಕರು ವಿಶಾಲ ಕೆ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಗಣ್ಯರಿಗೆ ಸ್ವಾಗತಿಸಿದರು, ನಿರೂಪಣೆಯನ್ನು ಯಶೋಧರ ಆಚಾರ್ಯ ಅಧ್ಯಕ್ಷರು ಹಾಲಿನ ಡೈರಿ ಪೆರಾಡಿ ಇವರು ನಿರ್ವಹಣೆ ಮಾಡಿ ಸೇವಾ ಪ್ರತಿನಿಧಿ ನಂದಿನಿ ವಂದನಾರ್ಪಣೆ ಸಲ್ಲಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕ ವೃಂದ, ಪೂಜಾ ವೃತಾದಾರಿಗಳು ಪ್ರಮುಖರಾದ ರಾಜೇಂದ್ರ ಜೈನ್, ರಾಜೇಶ್ ಜೈನ್ ತಾಲೂಕು ಸಿಎಸ್ಸಿ ನೋಡೆಲ್ ಅಧಿಕಾರಿ ಸುರೇಶ್ ಕುಮಾರ್, ಹಾಗೂ ಸೇವಾ ದಾರೆ ಭವ್ಯಾ ಮತ್ತು ಒಕ್ಕೂಟದ ಮಾಜಿ ಅಧ್ಯಕ್ಷರು/ ಪದಾಧಿಕಾರಿಗಳು/ಸದಸ್ಯರು ಹಾಗೂ ಊರಿನ ಗಣ್ಯರು ಸಮಸ್ತ ಭಕ್ತರು ಉಪಸ್ಥಿತರಿದ್ದರು.






