ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಜಿಲ್ಲೆಯ ಅತ್ಯಂತ ಪುರಾತನ ಕಂಬಗಳಲ್ಲಿ ವೇಣೂರು- ಪೆರ್ಮುಡ, ಸೂರ್ಯ-ಚಂದ್ರ ಜೋಡುಕರೆ ಕಂಬಳ ಕೂಡ ಒಂದು. ಹಾಗಾಗಿ ವೇಣೂರು ಕಂಬಳ ರಾಜ್ಯದ ಗಮನ ಸೆಳೆದ ಗ್ರಾಮೀಣ ಸೊಗಡಿನ ಕಂಬಳವಾಗಿದೆ. ಕೀರ್ತಿಶೇಷ ಮಾಜಿ ಶಾಸಕ ವಸಂತ ಬಂಗೇರರವರು ಕಳೆದ 31ವರ್ಷಗಳಿಂದ ಅತ್ಯಂತ ಶಿಸ್ತುಬದ್ಧವಾಗಿ ಈ ಕಂಬಳವನ್ನು ನಡೆಸಿಕೊಂಡು ಬಂದಿದ್ದರು. ಈ ಬಾರಿಯ 33ನೇ ವರ್ಷದ ಹೊನಲು ಬೆಳಕಿನ ಕಂಬಳವು ಮಾ.21ರಂದು ನಡೆಯಲಿದೆ ಎಂದು ವೇಣೂರು ಪೆರ್ಮುಡ ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಅವರು ಮಾ.18ರಂದು ವೇಣೂರು- ಪೆರ್ಮುಡ ಕಂಬಳದ ಬಗ್ಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ನೇರವೇರಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಪತ್ರಕರ್ತೆ, ಗ್ಯಾರಂಟಿ ನ್ಯೂಸ್ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ನೇರವೇರಿಸಲಿದ್ದಾರೆ. ಸಭಾಧ್ಯಕ್ಷರಾದ ಯು.ಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಚಿವರು, ಶಾಸಕರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು ಭಾಗಹಿಸಲಿದ್ದಾರೆ ಎಂದರು. ಈ ಕಂಬಳ ಕೂಟದಲ್ಲಿ ಊರ ಪರವೂರ ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೇಂದರು.
ಪತ್ರಿಕಾಗೋಷ್ಠಿಯಲ್ಲಿ ವೇಣೂರು- ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ಲ. ನಿತೀಶ್ ಎಚ್ ಕೋಟ್ಯಾನ್, ಪ್ರಧಾನ ಸಂಚಾಲಕ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಗೋಪಾಲ್ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು ಉಪಸ್ಥಿತರಿದ್ದರು.





