ವೇಣೂರು: ಪಿಯಂಶ್ರೀ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಜಿರೆ ಇಲ್ಲಿಯ ವಾರ್ಷಿಕೋತ್ಸವ ಸಮಾರಂಭವು ನ. 29ರಂದು ಬೆಳಿಗ್ಗೆ 9-00 ಗಂಟೆಯಿಂದ ಆರಂಭವಾಗಲಿದೆ.
ಅಂದು ಬೆಳಿಗ್ಗೆ 9-00 ಗಂಟೆಗೆ ಧ್ವಜಾರೋಹಣ, ಬಳಿಕ ಉಪಹಾರ, ಬಹುಮಾನ ವಿತರಣೆ ನಡೆಯಲಿದೆ. ಅಪರಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಅಂಗನವಾಡಿ, ಎಲ್ ಕೆಜಿ, ಯುಕೆಜಿ, 1, 2 ಮತ್ತು 3 ನೇ ತರಗತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3-00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ.





