ವೇಣೂರು: ಗ್ರಾ.ಪಂ. ವೇಣೂರು, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಬೆಳ್ತಂಗಡಿ, ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಹಾಗೂ ಶ್ರೀರಾಮ ಭಜನ ಮಂಡಳಿ ನಡ್ತಿಕಲ್ಲು ಇವರ ಸಹಯೋಗದಲ್ಲಿ ಕೇಂದ್ರ ಸರಕಾರದ ವಿಮಾ ಯೋಜನೆಗಳ ಚಿರ ನೂತನ ಜನಸುರಕ್ಷಾ ಅಭಿಯಾನವು ನಡ್ತಿಕಲ್ಲು ಶ್ರೀರಾಮ ಭಜನ ಮಂದಿರದ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಉದ್ಘಾಟಿಸಿ, ಕೇಂದ್ರ ಸರಕಾರದ ಜನೋಪಯೋಗಿ ಸಾಕಷ್ಟು ಯೋಜನೆ, ಸವಲತ್ತುಗಳಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ನಬಾರ್ಡ್ ನ ಜಿಲ್ಲಾ ಡಿಡಿಎಂ ಸಂಗೀತ ಕರ್ತ, ಅಮೂಲ್ಯ ಆರ್ಥಿಕ ಸಾಕ್ಷಾರತ ಕೇಂದ್ರ ಬೆಳ್ತಂಗಡಿ ಯ ಸಮಾಲೋಚಕಿ ಉಷಾ ನಾಯಕ್, ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಉಪಾಧ್ಯಕ್ಷರಾದ ಉಮೇಶ್ ನಡ್ತಿಕಲ್ಲು, ವೇಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಸುಂದರ್ ಹೆಗ್ಡೆ ಬಿಇ, ಯುವಸೇವಾ ಸಂಗಮ ವೇಣೂರು ಇದರ ಅಧ್ಯಕ್ಷರಾದ ಕೆ. ವಿಜಯ ಗೌಡ, ಶ್ರೀ ಕ್ಷೇ ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕಿ ಶಾಲಿನಿ, ಪಂಚಾಯತ್ ಸದಸ್ಯರಾದ ಹರೀಶ್ ಪಿ.ಎಸ್, ವೀಣಾ ದೇವಾಡಿಗ, ಪುಷ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.





