ವೇಣೂರು: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್ನ ದ.ಕ. ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ (ಡಿಡಿಎಂ) ಶ್ರೀಮತಿ ಸಂಗೀತ ಕರ್ತಾ ಅವರು ಬೇಟಿ ನೀಡಿದರು.
ಸಂಘದ ಕಛೇರಿಯ ಬಗ್ಗೆ ಹಾಗೂ ಕಾರ್ಯವೈಖರಿಯ ಬಗ್ಗೆ ಸಂಗೀತ ಕರ್ತಾ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ. ಅವರು ಸಂಗೀತ ಕರ್ತಾ ಅವರನ್ನು ಸ್ವಾಗತಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.





