ವೇಣೂರು: ಬಜಿರೆ ಪಿಯಂಶ್ರೀ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು. ಕ್ಷಮಾ ಸರಕಾರದ ಎನ್ಎಂಎಂಸ್ (National Means-cum-Merit Scholarship) ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾಳೆ.
ಎನ್ಎಂಎಂಸ್ (NMMS) ಎಂದರೆ ರಾಷ್ಟ್ರೀಯ ಸಾಧನೆ ಮತ್ತು ಅರ್ಹತಾ ವಿದ್ಯಾರ್ಥಿವೇತನ. ಇದು 8ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಪ್ರಮುಖ ಪ್ರೋತ್ಸಾಹಕ ಯೋಜನೆಯಾಗಿದೆ.
ರಾಜ್ಯ ಸರ್ಕಾರಗಳು ನಡೆಸುವ ಎನ್ಎಂಎಂಎಸ್ ಲಿಖಿತ ಪರೀಕ್ಷೆಯ (SAT ಮತ್ತು MAT) ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.





