ಸಾರಿಗೆ ಬಸ್ನ ಹೆಡ್ಲೈಟ್ಗಳು ಕಾರ್ಯನಿರ್ವಹಿಸದೆ, ಮೊಬೈಲ್ ಟಾರ್ಚ್ನೊಂದಿಗೆ ಬಸ್ ಚಲಾಯಿಸಿದ ವಿಡಿಯೋವೊಂದು ವೈರಲ್ ಆಗಿದೆ. ಕಲಬುರಗಿಯಲ್ಲಿ ಕೆಕೆಆರ್ಟಿಸಿ ಬಸ್ಸೊಂದರ ಹೆಡ್ಲೈಟ್ ಕೆಟ್ಟುಹೋದಾಗ, ನಿರ್ವಾಹಕ ಮೊಬೈಲ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ನಿರ್ಲಕ್ಷ್ಯ ವಹಿಸಿದ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.



