ಅಳದಂಗಡಿ: ಕುಲಾಲ್ ಪ್ರೀಮಿಯರ್ ಲೀಗ್ ಶಿರ್ಲಾಲು ಕುಲಾಲರ ಟ್ರೋಫಿ-2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಗುರುವಾರ ಬೋಟೆಲೂಮಾರು ಕರಂಬಾರು ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ಲಾಲು ಕುಲಾಲರ ಸಂಘದ ಗೌರವ್ಯಾಧ್ಯಕ್ಷರಾದ ರಾಜೇಶ್ ನೂಜಿಗೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಭಾಕರ ಕುಲಾಲ್ ವಹಿಸಿದರು. ಈ ಸಂದರ್ಭದಲ್ಲಿ ತಂಡದ ಮಾಲಕರಾದ ರತನ್ ಕುಲಾಲ್, ಮಾಧವ ಕುಲಾಲ್, ರಾಜೇಶ್ ಬೈರೊಟ್ಟು , ಸುನಿಲ್ ಕೆದ್ದು ಉಪಸಿತರಿದ್ದರು.

ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಿತು. ಬಹುಮಾನ ವಿತರಣೆ ಮಾಡಲಾಯಿತು ಪ್ರಥಮ ಬಹುಮಾನವನ್ನು ಪ್ರಾಂಶಿ ಚಾಲೆಂಜರ್ಸ್ , ದ್ವಿತೀಯ ಬಹುಮಾನವನ್ನು ಬೈರೊಟ್ಟು ಬ್ರದರ್ಸ್ ಪಡೆದುಕೊಂಡರು.






