ವೇಣೂರು: ಭಾರತೀ ಶಿಶು ಮಂದಿರ (ಸೇವಾ ಶರಧಿ ವಿಶ್ವಸ್ತ ಮಂಡಳಿ, ವೇಣೂರು ಮಹಿಳಾ ಮಂಡಲ ಹಾಗೂ ಯುವತಿ ಮಂಡಲ ಸಂಯುಕ್ತ ಆಶ್ರಯದಲ್ಲಿ ವೇಣೂರು ಭಾರತೀ ಶಿಶು ಮಂದಿರದಲ್ಲಿ ರಜತ ವರ್ಷದ ಸವಿ ನೆನಪಿಗಾಗಿ ನಿರ್ಮಿಸಲಾದ ಭಾರತೀ ಕಲಾ ಮಂಟಪದ ಲೋಕಾರ್ಪಣೆ ಹಾಗೂ ಸಂಯುಕ್ತ ವಾರ್ಷಿಕೋತ್ಸವವು ಜ. 11ರಂದು ಬೆಳಿಗ್ಗೆ 8-30ರಿಂದ ನಡೆಯಲಿದೆ.
ಬೆಳಿಗ್ಗೆ 10-30 ಗಂಟೆಗೆ ಕಲಾ ಮಂಟಪದ ಲೋಕಾರ್ಪಣೆ, ಅಪರಾಹ್ನ 3-00 ಗಂಟೆಯಿಂದ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.






