ಪ್ರತೀ ಕ್ಷೇತ್ರದಲ್ಲಿ ಮಿನುಗುವ ಸಾಧಕರು ಇಲ್ಲಿದ್ದಾರೆ: ಶಾಸಕ ಹರೀಶ್ ಪೂಂಜ
ಬಳಂಜ: ಬಳಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿಭಾಗದ ಅಮೃತ ಮಹೋತ್ಸವ ಸಮಾರಂಭದ ಉದ್ಘಾಟನೆಯು ಇದೀಗ ಬಳಂಜ ಶಾಲಾ ವಠಾರದಲ್ಲಿ ನಡೆಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಉದ್ಘಾಟಿಸಿ, ಶಾಸಕರ ಮೂಲಕ ಇನ್ನಷ್ಟು ಅನುದಾನ ಶಾಲೆಗೆ ಬರಲಿ, ಶಾಲೆಯ ಅಭಿವೃದ್ಧಿ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ, ಎಲ್ಲಾಕ್ಷೇತ್ರಗಳಲ್ಲೂ ಸಾಧಕರಿರುವ ಬೆಳ್ತಂಗಡಿ ತಾಲೂಕಿನಲ್ಲೇ ಏಕೈಕ ಗ್ರಾಮ ಬಳಂಜ. ಶಾಲೆ ಮತ್ತು ದೇವಸ್ಥಾನದ ಬಗ್ಗೆ ಇಲ್ಲಿನ ಬಂಧುಗಳಿಗೆ ಅಪಾರ ಗೌರವ ಮತ್ತು ಪ್ರೀತಿ. ಅದಕ್ಕೆ ಇಂದು ಆಯೋಜಿಸಿದ ಅಮೃತ ಮಹೋತ್ಸವವೇ ಸಾಕ್ಷಿ ಎಂದರು.
ಬಳಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್, ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ಬರೊಡಾ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿದ್ಯಾಂಗ ಉಪ ಉಪನಿರ್ದೇಶಕರಾದ ಜಿಎಸ್ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಎಸ್ಡಿಎಂಸಿ ಕಾರ್ಯಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಬಳಂಜ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರತ್ನಾಕರ ಪೂಜಾರಿ, ಅಮೃತ ಮಹೋತ್ಸವ ಸಮತಿ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ, ಚಂದ್ರಶೇಖರ ಬಿ.ಕೆ. ಹಿರಿಯ ವೈದ್ಯ ಡಾ. ಎಂ.ಎನ್. ತುಳುಪುಳೆ,
ಹರೀಶ್ ವೈ ಚಂದ್ರಮ, ಮುಖ್ಯ ಶಿಕ್ಷಕರುಗಳಾದ ರಂಗಸ್ವಾಮಿ ಮತ್ತು ಸುಲೋಚನಾ ಕೆ., ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಬಳಂಜ ಶಾಲಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮನೋಹರ ಬಳಂಜ, ಬಳಂಜ ಗ್ರಾ.ಪಂ. ಸದಸ್ಯರು, ವಿದ್ಯಾರ್ಥಿ ಸಂಘಗಳ ಅಧ್ಯಕ್ಷರುಗಳಾದ ಜೋವಿಕಾ ಪಿಂಟೋ, ಮನ್ವಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕರಾಗಿ ಅಶ್ವಥ್ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿದರು.






