ವೇಣೂರು: ಇಲ್ಲಿನ ಪಡ್ಡಂದಡ್ಕ ನಿವಾಸಿ ಕೆ. ಅಬ್ದುಲ್ ರಹಿಮಾನ್ ( 72) ಇವರು ಶುಕ್ರವಾರ ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪಡ್ಡಂದಡ್ಕ ಜುಮ್ಮಾ ಮಸೀದಿಯ ಪ್ರಭಾರ ಅಧ್ಯಕ್ಷರಾಗಿದ್ದರು. ಅಲ್ಲದೆ ಮೂಡಬಿದ್ರಿ ಶ್ರೀ ಮಹಾವೀರ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.





