ವೇಣೂರು: ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರು ಎಂಬಲ್ಲಿ ಅ೦ಬೆಡ್ಕರ್ ಭವನಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ.
ಪ೦ಚಾಯತ್ ಕಾಯ್ದಿರಿಸಿದ ಜಾಗ ಒತ್ತುವರಿ ಆಗಿದ್ದು ಈ ಬಗ್ಗೆ ಗ್ರಾಮ ಪ೦ಚಾಯತ್ ಸದಸ್ಯರಾದ ಅನೂಪ್ ಜೆ. ಪಾಯಸ್, ಲೋಕಯ್ಯ ಪೂಜಾರಿ, ಧರ್ಮರಾಜ್ ಸೇರಿದ೦ತೆ ಹಲವರು ಧರಣಿ ಹೋರಾಟ ನಡೆಸಿದ್ದರು. ಇದೀಗ ಅಕ್ರಮವನ್ನು ತೆರವುಗೊಳಿಸಿ ಗಡಿಗುರುತು ಮಾಡಲಾಗಿದೆ.
ಗಡಿಗುರುತು ವೇಳೆ ಸ್ಥಳಿಯರಾದ ಶಶಿಧರ ಶೆಟ್ಟಿ ನಾರಡ್ಕ, ಚ೦ದ್ರಶೇಖರ್, ಗಜೇಂದ್ರ, ಸುಭಾಶ್, ವಿಮಲ, ಮಾಜಿ ಸದಸ್ಯೆ ಚ೦ದ್ರಾವತಿ ಸೇರಿ ಹಲವರು ಉಪಸ್ಥಿರಿದ್ದರು.






