ವ್ಯಾಪಾರದಲ್ಲಿ ಧರ್ಮ ಇದ್ದಾಗ ಅಭಿವೃದ್ಧಿ: ಡಾ. ಪದ್ಮಪ್ರಸಾದ್ ಅಜಿಲರು
ವೇಣೂರು: ವೇಣೂರು-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಹೊಸಂಗಡಿ ಗ್ರಾಮದ ಪೆರಿಂಜೆಯ ಶ್ರೀಮತಿ ದೇವಕಿ ಬಿಸಿನೆಸ್ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ನಿರ್ಮಿಸಲಾದ ಎಚ್.ಪಿ. ಪೆಂಟ್ರೋಲ್ ಬಂಕ್ ಇದರ ಉದ್ಘಾಟನೆಯು ನ. ೨೮ರಂದು ವಿಜ್ರಂಭನೆಯಿಂದ ನಡೆಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲಿಸಿ, ಮುಂಬೈ ಉದ್ಯಮಿಯೋರ್ವರು ಗ್ರಾಮೀಣ ಭಾಗದಲ್ಲಿ ಉದ್ಯಮ ನಡೆಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಆಗಿದೆ. ವ್ಯಾಪಾರದಲ್ಲಿ ಧರ್ಮ ಇರಬೇಕು, ಧರ್ಮದಾರಿಯಲ್ಲಿ ನಡೆದರೆ ಅಭಿವೃದ್ಧಿ ಆಗುತ್ತದೆ, ಅದಕ್ಕೆ ರೇವತಿ ಎಂಟರ್ ಪ್ರೈಸಸ್ನ ಮಾಲಕರು ಸಾಕ್ಷಿಯಾಗಿದ್ದಾರೆ ಎಂದರು.

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಅವರು ದೀಪ ಪ್ರಜ್ವಲಿಸಿ, ನೂತನ ಸಂಸ್ಥೆಗೆ ಶುಭಕೋರಿದ ಅವರು, ಪೆಟ್ರೋಲ್ ಡಿಸೇಲ್ ಮಾತ್ರವಲ್ಲದೆ, ಸಿಎನ್ಜಿ, ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಚಾರ್ಚಿಂಗ್ ವ್ಯವಸ್ಥೆಯೂ ನಿರ್ಮಾಣವಾಗಲಿ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಧಾನಿಯವರ ಆಶಯದಂತೆ ಗ್ರಾಮೀಣ ಭಾಗದಲ್ಲಿ ಉದ್ಯಮ ನಡೆಸಲು ಮುಂದಾಗಿರುವ ವಿಶ್ವನಾಥ ಶೆಟ್ಟರ ಕಾರ್ಯವನ್ನು ಶ್ಲಾಘಿಸಿದ ಅವರು, ಹತ್ತಾರು ಸಂಸ್ಥೆಗಳನ್ನು ತೆರೆಯುವ ಅವಕಾಶ ದೇವರು ನೀಡಲಿ ಎಂದರು.
ಪ್ರಸನ್ನ ಆರ್. ಹೆಗ್ಡೆ ಪೆರಿಂಜೆಗುತ್ತು, ನವೀನ್ ಕುಮಾರ್ ಎಂ.ಜಿ. ಡಿಜಿಎಂ, ಎಚ್ಪಿಸಿಎಲ್, ವಿಶ್ವನಾಥ್ ಆತ್ಮರಾಮ್, ಬೋಯಿರ್ ಶಾಸಕರು, ಕಲ್ಯಾಣ್ ಪಶ್ಚಿಮ, ಮುಂಬೈ ಮಾತನಾಡಿ ಶುಭ ಹಾರೈಸಿದರು.
ಪ್ರಭಾತ್ ಶ್ರೀವಾಸ್ತವ್ ಮುಖ್ಯ ಅಭಿಯಂತರರು, ಎಚ್ಪಿಸಿಎಲ್ ಮಂಗಳೂರು ವಲ, ಜಯವಾಂತ್ ಬೊಯೆರ್, ಮಾಜಿ ಕಾರ್ಪೋರೇಟರ್ ಕ,ಣ್ ಪಶ್ಚಿಮ, ಮುಂಬೈ, ಕ್ರಿಸ್ತರಾಜ ದೇವಾಲಯ ವೇಣೂರ, ಎಚ್. ಆಲಿಯಬ್ಬ ಅಧ್ಯಕ್ಷರು, ಜುಮ್ಮಾ ಮಸೀದಿಗೆ ಪುಲಾಬೆ, ಶ್ರೀ ಜಗದೀಶ್ ಹೆಗ್ಡೆ ಅಧ್ಯಕ್ಷರು, ಗ್ರಾ.ಪಂ., ಹೊಸಂಗಡಿ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ, ವೇಣೂರು ಸಿಎ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ಮಹಮ್ಮದ್, ರೇವತಿ ಎಂಟರ್ ಪ್ರೈಸಸ್ನ ಮಾಲಕರುಗಳಾದ ಶ್ರೀಮತಿ ದೇವಿಕಾ ವಿ. ಶೆಟ್ಟಿ, ವಿಶ್ವನಾಥ ಎಸ್. ಶೆಟ್ಟಿ ಮತ್ತು ಶ್ರೀಮತಿ ರೇವತಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ
ನೂತನ ಸಂಸ್ಥೆಯ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ರಮೇಶ್ ಪೂಜಾರಿ, ನಾಗೇಶ್ ಅಂಚನ್, ಹರೀಶ್ಚಂದ್ರ, ಬದ್ರುದ್ದಿನ್, ಪ್ರವೀಣ್ ಶೆಟ್ಟಿ ಮಂಗಳೂರು, ಅರುಣ್ ಹೆಗ್ಡೆ, ವಿಶ್ವಾಸ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ವಿಶ್ವನಾಥ ಎಸ್. ಶೆಟ್ಟಿ ಸ್ವಾಗತಿಸಿ, ಉಮೇಶ್ ಶೆಟ್ಟಿ ವಂದಿಸಿದರು.
ಯಕ್ಷಗಾನ ಬಯಲಾಟ
ರಾತ್ರಿ ೬-೩೦ರಿಂದ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.





