ವೇಣೂರು: ಗುಂಡೂರಿ ಗ್ರಾಮದ ತುಂಬೆದಲೆಕ್ಕಿಯಲ್ಲಿ ಡಿ. 18ರಂದು ದೊಂಪದಬಲಿ ನೇಮೋತ್ಸವ ಜರಗಲಿದೆ.
ಅಂದು ಬೆಳಿಗ್ಗೆ 10-00 ಗಂಟೆಯಿಂದ ನವಕ ಕಲಶಾಭಿಷೇಕ, ಪಂಚಪರ್ವ ನಡೆಯಲಿದೆ. ಸಂಜೆ 5-00 ಗಂಟೆಗೆ ಗುತ್ತುಗಳಿಂದ ಶ್ರೀ ದೈವಗಳ ಭಂಡಾರ ಆಗಮನವಾಗಲಿದೆ. ಬಳಿಕ ರಾತ್ರಿ ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂತಾಯ ಹಾಗೂ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಲಿದೆ.









