ಉಜಿರೆ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಇಲಾಖೆ ವತಿಯಿಂದ ಧರ್ಮಸ್ಥಳದಲ್ಲಿರುವ “ಮಂಜುಷಾ” ವಸ್ತುಸಂಗ್ರಹಾಲಯಕ್ಕೆ ಸಾರ್ವಜನಿಕರ ವೀಕ್ಷಣೆಗಾಗಿ ಮಂಜೂರಾದ ಅಗ್ನಿಶಾಮಕ ವಾಹನವನ್ನು ಬುಧವಾರ ಧರ್ಮಸ್ಥಳದಲ್ಲಿ ಮಂಗಳೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ. ತಿರುಮಲೇಶ್ ಹಸ್ತಾಂತರಿಸಿದರು. ಮಂಜೂಷ ಮ್ಯೂಸಿಯಂನ ಪ್ರಬಂಧಕರಾದ ದಿವಾಕರ ಪ್ರಭು ಉಪಸ್ಥಿತರಿದ್ದರು.









