ಬೆಂಗಳೂರು, ಜ. 19: ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿದೆ.
ಕಚೇರಿಯಲ್ಲಿ ಕುಳಿತು ಪೊಲೀಸ್ ಯೂನಿಫಾರಂನಲ್ಲಿಯೇ ರಾಮಚಂದ್ರರಾವ್ ಮುತ್ತಿಟ್ಟಿರುವ ಹಸಿಬಿಸಿ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿವೆ. ಚೇರ್ ಮೇಲೆ ಕುಳಿತು ಮಹಿಳೆಯನ್ನ ಅಪ್ಪಿಕೊಂಡು IPS ಅಧಿಕಾರಿ ಸರಸ ನಡೆಸಿದ್ದು, ಇದು ರನ್ಯಾರಾವ್ ಪ್ರಕರಣಕ್ಕಿಂತ ಮೊದಲು ನಡೆದಿರುವ ಘಟನೆ ಎಂಬ ಮಾಹಿತಿ ಸಿಕ್ಕಿದೆ. ಅತ್ತ ಮಗಳು ರನ್ಯಾರಾವ್ ಚಿನ್ನ ಕಳ್ಳಸಾಗಾಣಿಕೆ ಕೇಸ್ನಕಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್ ಆಗಿರೋದು ಜನ ಹುಬ್ಬೇರುವಂತೆ ಮಾಡಿದೆ.





