ವೇಣೂರು: ಇಲ್ಲಿಯ ಕರಿಮಣೇಲು ಗ್ರಾಮದ ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಧನು ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಚಂದ್ರಶೇಖರ ಅಸ್ರಣ್ಣರು ಬಿಡುಗಡೆಗೊಳಿಸಿದರು. ಅವರೊಂದಿಗೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸತೀಶ್ ಚಿಗುರು ಹಾಗೂ ಸದಸ್ಯರು ಜೊತೆಗಿದ್ದರು.





