ಬೆಂಗಳೂರು, ನ. 28: 15000 ರೂ.ವೇತನ ನೀಡುವಂತೆ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಮನವೊಲಿಸುವಲ್ಲಿ ಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಗೃಹ ಕಚೇರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರೊಂದಿಗಿನ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇದಕ್ಕೆ ಆರಂಭದಲ್ಲಿ ಆಶಾ ಕಾರ್ಯಕರ್ತೆಯರು ಒಪ್ಪಲಿಲ್ಲವಾದರೂ, ಸಿಎಂ ಎಲ್ಲವನ್ನೂ ತಿಳಿ ಹೇಳಿ ಮನವೊಲಿಸಿದ್ದು, ಅಂತಿಮವಾಗಿ ಆಶಾ ಕಾರ್ಯಕರ್ತೆಯರು 2 ಸಾವಿರ ರೂಪಾಯಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಆಶಾ ಕಾರ್ಯಕರ್ತೆಯರ ಜೊತೆಗಿನ ಸಿಎಂ ಸಂಧಾನ ಸಕ್ಸಸ್ ಆಗಿದೆ.ಬೆಳಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಸಹ ಆಶಾ ಕಾರ್ಯಕರ್ತೆಯರ ಜೊತೆ ಸಭೆ ಮಾಡಿದ್ದು, 2000 ರೂಪಾಯಿ ಹೆಚ್ಚಳ ಮಾಡುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದ್ದರು. ಆದ್ರೆ, ಆಶಾ ಕಾರ್ಯಕರ್ತೆಯರು ಒಪ್ಪಿರಲಿಲ್ಲ. ಈಗ ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್ ಮಾತಿಗೆ ಆಶಾ ಕಾರ್ಯಕರ್ತೆಯರು 2000 ರೂಪಾಯಿಗೆ ಒಪ್ಪಿಕೊಂಡಿದ್ದಾರೆ.

