ಬೆಳ್ತಂಗಡಿ: ತಾಲೂಕಿನ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಹರೀಶ್ ಪೂಂಜ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಮತ್ತು ವಿವೇಚನಾ ಅನುದಾನದಡಿ ಮಂಜೂರು ಮಾಡಿದ್ದಾರೆ.
ಗರ್ಡಾಡಿ ಗ್ರಾಮದ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ಅಭಿವೃದ್ಧಿಗೆ ರೂ.1.00ಕೋಟಿ, ಕರಾಯ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರೂ.20.00ಲಕ್ಷ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ ಅಭಿವೃದ್ಧಿ ಕಾರ್ಯಕ್ಕೆ 10-00 ಲಕ್ಷ, ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ 5.00 ಲಕ್ಷ,, ಶ್ರೀ ಅನಂತೇಶ್ವರ ದೇವಸ್ಥಾನ, ಬಳ್ಳಮಂಜ 10.00 ಲಕ್ಷ, ಚಿಬಿದ್ರೆ ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕುಡುಮಡ್ಕ 5.00 ಲಕ್ಷ, ಮಚ್ಚಿನ ಗ್ರಾಮದ ಮಾಣೂರು ಶ್ರೀ ಧರ್ಮಶಾಸ್ತಾವು ದೇವಸ್ಥಾನ10.00 ಲಕ್ಷ.





