ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದ ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ ಎನ್.
ಬೆಳ್ತಂಗಡಿ: ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ.) ಗುರುವಾಯನಕೆರೆ ಇದರ ವತಿಯಿಂದ ಎ. ೨೬ ರಂದು ನಡೆಯಲಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಶ್ರೀ ಕ್ಷೇತ್ರ ನಡುಬೊಟ್ಟು ಇಲ್ಲಿ ಧರ್ಮದರ್ಶಿ ಡಾ. ರವಿ ಎನ್. ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವನಾಥ್ ಎನ್., ಸೇವಾ ಸಂಘದ ಸಭಾಭವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಮೂಲ್ಯ ಅನಿಲಡೆ, ತಾಲೂಕು ಸಂಘದ ಅಧ್ಯಕ್ಷರಾದ ಸೋಮಯ ಹನೈನಡೆ, ಶಾಂಭವಿ ಎಸ್. ಹನೈನಡೆ, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕೆ.ಎನ್., ಕೋಶಾಧಿಕಾರಿ ದಿನೇಶ್ ಮಾಲಾಡಿ, ಜೊತೆ ಕಾರ್ಯದರ್ಶಿ ಸಂದೇಶ್ ಕುಮಾರ್, ತಾರನಾಥ ಹನೈನಡೆ, ದಿನೇಶ್ ಕೊಂಡೆಮಾರು, ಉಜ್ವಲ್, ಆನಂದ ಮೂಲ್ಯ, ಕೃಷ್ಣಪ್ಪ ಮೂಲ್ಯ ಬರ್ನ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ತಾಲೂಕಿನ ಸಮುದಾಯದ ಪ್ರತೀ ಮನೆಯ ಶ್ರೇಯೋಭಿವೃದ್ಧಿಗೆ ಈ ಸಾಮೂಹಿಕ ಪೂಜೆಯನ್ನು ಹಮ್ಮಿಕೊಂಡಿದ್ದು, ಸಮುದಾಯದ ಪ್ರತೀಮನೆಯಿಂದ ಈ ಪೂಜಾಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆಪಾತ್ರರಾಗುವಂತೆ ಸಂಘದ ಅಧ್ಯಕ್ಷರಾದ ಸೋಮಯ್ಯ ಹನೈನಡೆ ವಿನಂತಿಸಿದ್ದಾರೆ.





