ತಾಲೂಕು ಕ್ರೀಡಾಂಗಣದಲ್ಲಿ ನಲಿಕೆ ಬಾಂಧವರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಮ್ಯಾಚ್
ಬೆಳ್ತಂಗಡಿ: ನಲಿಕೆ ಬಾಂಧವರ 5 ಓವರ್ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರಿಗುಡಿ ಫ್ರೆಂಡ್ಸ್ ಟ್ರೋಫಿ-2026 ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಜ. 3 ಮತ್ತು 4ರಂದು ನಡೆಯಲಿದೆ.
ಜ. 3ರಂದು ಸಂಜೆ 7 ಗಂಟೆಗೆ ಶಾಸಕ ಹರೀಶ್ ಪೂಂಜ ಅವರು ಉದ್ಘಾಟಿಸಲಿದ್ದಾರೆ. ಶಶಿ ಬಂಗಾಡಿ ದೈವ ನರ್ತಕರು ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಮೆಸ್ಕಾಂ ಅಧ್ಯಕ್ಷ ಟ್ರೋಫಿ ಅನಾವರಣ ಮಾಡಲಿದ್ದು, ನಲಿಕೆಯವರ ಸಮಾಜಸೇವಾ ಸಂಘದ ಪ್ರಭಾಕರ ಶಾಂತಿಕೋಡಿ, ವಸಂತ ಬಿ.ಕೆ. ಸೇರಿದಂತೆ ಹಲವು ಅತಿಥಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜ. 4ರಂದು ಬೆಳಿಗ್ಗೆ 9-00 ಗಂಟೆಗೆ ಸಮಾರೋಪ ನಡೆಯಲಿದ್ದು, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಸೇರಿದಂತೆ ಹಲವು ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.






