ಬೆಳ್ತಂಗಡಿ, ಮೇ. 21: ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಯುವಕರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಯುವತಿಯರಿಗೆ ದೌರ್ಜನ್ಯ ನಡೆಸಿದ ಆರೋಪಿಗಳು. ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಈ ಮೂವರು ಯುವಕರೊಂದಿಗೆ ಮೇ 20 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಲಪಾತಕ್ಕೆ ತೆರಳಿರುತ್ತಾರೆ. ಈ ವೇಳೆ ಯುವಕರು, ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುತ್ತಾರೆ. ಈ ವೇಳೆ ಸಂತ್ರಸ್ತ ಯುವತಿಯರು ಪ್ರತಿರೋಧಿಸಿದ್ದು, ಸ್ಥಳದಲ್ಲಿದ್ದ ಜನರು ಯುವಕರನ್ನು ತಡೆದು, ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
ಮೂವರು ಯುವಕರನ್ನು ಮೇ. 20 ರಂದು ರಾತ್ರಿ ಬೆಳ್ತಂಗಡಿ ಪೋಲಿಸರು ಬಂಧಿಸಿ ಮೇ.21 ರಂದು ಸಂಜೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಸಾಣೆಗೆ ಒಳಪಡಿಸಿ ಬಳಿಕ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನಾಯಾಧೀಶರಾದ ವಿಜೇಯೆಂದ್ರ ಟಿ. ಹೆಚ್ ಅವರು ಮುಂದೆ ಹಾಜರು ಪಡಿಸಲಾಗಿದ್ದು ಮೂವರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ನಡುವೆ ನೊಂದ ಸಂತ್ರಸ್ತ ಮೂವರು ಯುವತಿಯರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.21 ರಂದು ಕರೆದುಕೊಂಡು ಹೋಗಿ ಮಧ್ಯಾಹ್ನದಿಂದ ಸಂಜೆಯವರೆಗೆ BNS 183 ಹೇಳಿಕೆ ದಾಖಲಿಸಿದ್ದಾರೆ.





