ಕುಕ್ಕೇಡಿ/ಮೂಡುಬಿದಿರೆ: ಅಲೇರಿ ಶ್ರೀ ಸತ್ಯಸಾರಾಮನಿ-ಕಾನದ ಕಟದ ಮೂಲ ಕ್ಷೇತ್ರ ಆಲೇರಿ, ಮಿಜಾರು ಮೂಡಬಿದ್ರೆ ಇಲ್ಲಿ ಫೆ. ೮ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯು ಕುಕ್ಕೇಡಿ ನಿಟ್ಟಡೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರಾದ ಚಂದ್ರಪ್ಪ ಮಾಸ್ಟರ್, ತಾಲೂಕು ಸಮಿತಿ ಉಪಾಧ್ಯಕ್ಷರಾದ ಶೇಖರ್ ವಿ. ಧರ್ಮಸ್ಥಳ, ಕೇಂದ್ರ ಸಮಿತಿಯ ಕೋಶಾಧಿಕಾರಿ ಶೇಖರ್ ಕುಕ್ಕೇಡಿ ಭಾಗವಹಿಸಿದ್ದರು.
ಕ.ದ.ಸಂ.ಸ ಹೋಬಳಿ ಸಂಚಾಲಕರಾದ ಚರಣ್ ಕುಕ್ಕೇಡಿ ಇವರು ಸ್ವಾಗತಿಸಿದರು. ಕುಕ್ಕೇಡಿ ಗ್ರಾಮ ಸಮಿತಿಯ ಪದಾಧಿಕಾರಿಗಳನ್ನು ವಿಸ್ತರಣೆ ಮಾಡಲಾಯಿತು. ಗೌರವ ಅಧ್ಯಕ್ಷರಾದ ಕೃಷ್ಣಪ್ಪ ನೆಲ್ಲಿಗುಡ್ಡೆ , ಅಧ್ಯಕ್ಷರಾಗಿ ಸಂಜೀವ ಪಿಲಿಯೂರು , ಉಪಾಧ್ಯಕ್ಷರಾಗಿ ನವೀನ್ ಕಾಂಜರಕಟ್ಟೆ, ಇನ್ನೋರ್ವ ಉಪಾಧ್ಯಕ್ಷರಾಗಿ, ವಸಂತ ನಿಟ್ಟಡೆ, ಕಾರ್ಯದರ್ಶಿಯಾಗಿ ಆನಂದ ಅಮೈಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ನಾಗಮ್ಮ ಕಾಂಜರಾಕಟ್ಟೆ, ಕೋಶಾಧಿಕಾರಿಯಾಗಿ ಪೂರ್ಣಿಮಾ ನಿಟ್ಟಡೆ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಉಮೇಶ್ ಪಿಲಿಯೂರು, ಹರೀಶ್ ಕಾಂಜರಕಟ್ಟೆ, ಶೀನ ಪಿಲಿಯೂರು, ಜಗದೀಶ್ ನಡ್ಯಲಿಕೆ, ರಮೇಶ್ ಕುಕ್ಕೇಡಿ, ಚಂದ್ರಾವತಿ ಹೊಸಗುಡ್ಡೆ, ಸದಾನಂದ ನಿಟ್ಟಡೆ, ಅಂಥೋನಿ ಪಂಡಿಜೆ, ಸಂಜೀವ ನೆಲ್ಲಿಗುಡ್ಡೆ, ಸುಜಯ್ ಪಂಡಿಜೆ ಹಾಗೂ ವಿಶ್ವನಾಥ ಹೊಸಗುಡ್ಡೆ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ಸಭೆಯನ್ನು ಉದ್ಧೇಶಿಸಿ ಚಂದ್ರಪ್ಪ ಮಾಸ್ಟರ್, ಶೇಖರ್ ವಿ. ಧರ್ಮಸ್ಥಳ, ಶೇಖರ್ ಕುಕ್ಕೇಡಿ ಇವರು ಮಾತನಾಡಿದರು, ಕುಕ್ಕೇಡಿ ಕ.ದ.ಸಂ.ಸ ಸಂಚಾಲಕರಾದ ಹರೀಶ್ ಪಂಡಿಜೆ ವಂದಿಸಿದರು.






