ಕೊಡಗು: ದೇಶದೆಲ್ಲೆಡೆ ಅಪಾರ ಜನಪ್ರಿಯತೆ ಹೊಂದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ವಿಭಿನ್ನ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಸಿನಿಮಾ ಪರದೆಯ ಮೇಲೆ ಮಾತ್ರವಲ್ಲದೆ, ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಅವರು, ಕೊಡಗು ಜಿಲ್ಲೆಯಲ್ಲೇ ಆದಾಯ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿ ಹೊರಹೊಮ್ಮಿದ್ದಾರೆ.
‘ರಶ್ಮಿಕಾ ಮಂದಣ್ಣ ಎಲ್ಎಲ್ಪಿ’ ಮೂಲಕ ತೆರಿಗೆ ಪಾವತಿ ರಶ್ಮಿಕಾ ಮಂದಣ್ಣ ಅವರು ಕೊಡಗಿನಲ್ಲಿ ತಮ್ಮ ಆದಾಯ ತೆರಿಗೆಯನ್ನು ‘ರಶ್ಮಿಕಾ ಮಂದಣ್ಣ ಎಲ್ಎಲ್ಪಿ’ ಹೆಸರಿನಲ್ಲಿ ಪಾವತಿಸುತ್ತಿದ್ದಾರೆ. ಈವರೆಗೆ ಅವರು ಒಟ್ಟು 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿರುವುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಇದು ಕೊಡಗು ಜಿಲ್ಲೆಯ ತೆರಿಗೆ ಪಾವತಿದಾರರಲ್ಲಿ ಅತಿ ಹೆಚ್ಚು ಮೊತ್ತ ಎನ್ನಲಾಗಿದ್ದು, ತೆರಿಗೆ ಪಾವತಿದಾರರ ಪೈಕಿ ರಶ್ಮಿಕಾ ಟಾಪ್ ಸ್ಥಾನದಲ್ಲಿದ್ದಾರೆ.






