ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ನ.16) ಸಂಜೆ ಪೈಲಟ್ ಸಮಯಪ್ರಜ್ಞೆಯಿಂದ ಕೊನೆಯ ಕ್ಷಣದಲ್ಲಿ ಬ್ರೇಕ್ ಹಾಕಿ ವಿಮಾನ ನಿಲ್ಲಿಸಿದ ಪರಿಣಾಮ ಸಂಭವನೀಯ ದೊಡ್ಡ ದುರಂತ ತಪ್ಪಿದೆ. ಈ ಘಟನೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಮಂಜುಳಾ ಎಸ್., ಅರವಿಂದ ಲಿಂಬಾವಳಿ, ನ್ಯಾಯಾಧೀಶರಾದ ರಾಜೇಶ್ ರೈ ಹಾಗೂ ಚೀನಾದಲ್ಲಿ ಫರ್ನಿಚರ್ ಖರೀದಿಗೆ ಹೊರಟಿದ್ದ ಮುಸ್ಲಿಂ ಉದ್ಯಮಿಗಳು ಸೇರಿದಂತೆ 229 ಪ್ರಯಾಣಿಕರು ಮತ್ತು ಏಳು ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ 6.10ಕ್ಕೆ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕ್ಆಫ್ಗೆ ಇನ್ನೇನು 100 ಮೀಟರ್ ಬಾಕಿ ಇರುವಾಗ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ.
ತಕ್ಷಣ ಪೈಲಟ್ ತುರ್ತು ಬ್ರೇಕ್ ಹಾಕಿ ರನ್ವೇಯಲ್ಲೇ ವಿಮಾನ ನಿಲ್ಲಿಸಿದ್ದು, ಈ ವೇಳೆ ವಿಮಾನದ ಚಕ್ರವೊಂದು ಒಡೆದಿದೆ.
ಎಮರ್ಜೆನ್ಸಿ ಬಾಗಿಲಿನ ಹತ್ತಿರವೇ ಸೀಟ್ ಬುಕ್ ಮಾಡಿದ್ದ ನಳಿನ್ ಕುಮಾರ್ ಕಟೀಲ್ ಅವರು, “ನೂರಾರು ದೇವಸ್ಥಾನಗಳ ಬ್ರಹ್ಮಕಲಶ ನಡೆಸಿದ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಪುಣ್ಯವೇ ನಮ್ಮನ್ನು ಉಳಿಸಿತು” ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿ, ರಾತ್ರಿ 11.30ಕ್ಕೆ ಬದಲಿ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.




