ಮೂಡಬಿದ್ರೆ: ನಗರದ ಹೊರವಲಯದಲ್ಲಿ ಯುವಕನ ಮೇಲೆ ತಲ್ವಾರ್ನಿಂದ ದಾಳಿ ನಡೆದಿರುವಂತಹ ಘಟನೆ ನಡೆದಿದೆ. ಬೈಕ್ನಲ್ಲಿ ತಲ್ವಾರ್ ಹಿಡಿದು ಸಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯವೆಸಗಲಾಗಿದೆ. ಮೂಡಬಿದ್ರೆ ನಿವಾಸಿ ಅಖಿಲೇಶ್ ಹಲ್ಲೆಗೊಳಗಾದ ವ್ಯಕ್ತಿ. ಮೊಣಕೈ ಭಾಗಕ್ಕೆ ಗಾಯವಾಗಿದ್ದು, ಮೂಡಬಿದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಲ್ವಾರ್ ದಾಳಿ ಮಾಡಿದ್ದ ನಾಲ್ವರ ಪೈಕಿ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿನಾನ್ ಎಂಬಾತನ್ನ ಹಿಡಿದು ಜನರು ಥಳಿಸಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.





