ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಚುರುಕುಗೊಳಿಸಿದೆ. ಇಂದು (ನವೆಂಬರ್ 14) ಎಸ್ಐಟಿ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಆರಂಭಗೊಂಡಿದೆ. ಈ ಮರುತನಿಖೆಯ ಭಾಗವಾಗಿ, ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯಾ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಈ ಐವರ ಹೇಳಿಕೆಗಳನ್ನು ಎಸ್ಐಟಿ ತಂಡವು ದಾಖಲಿಸಿಕೊಳ್ಳುತ್ತಿದೆ. ಎಸ್ಐಟಿ ಕಚೇರಿಗೆ ತನಿಖಾಧಿಕಾರಿ ಲೋಕೇಶ್ ಮತ್ತು ಸಹ ತನಿಖಾಧಿಕಾರಿ ಮನೋಜ್ ನಾಯಕ್ ಅವರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.




ಮರುತನಿಖೆಗೆ ಆದೇಶ ಸಿಕ್ಕ ಬೆನ್ನಲ್ಲೇ ಎಸ್ಐಟಿ ತಂಡವು ಹಲವು ಮಹತ್ವದ ಬೆಳವಣಿಗೆಗಳನ್ನು ಕೈಗೊಂಡಿದೆ. ಈ ಹಿಂದಿನ ತನಿಖಾ ಸಂಸ್ಥೆಗಳಿಂದಲೂ ಕೂಡ ದಾಖಲೆಗಳನ್ನು ಮತ್ತು ಮಾಹಿತಿಯನ್ನು ಎಸ್ಐಟಿ ತಂಡ ಸಂಗ್ರಹಿಸಿದೆ. ಸೌಜನ್ಯಾ ಹತ್ಯೆಯಾದ ಸ್ಥಳ ಮತ್ತು ಆಕೆಯ ಮೃತದೇಹ ಸಿಕ್ಕ ಸ್ಥಳದಲ್ಲಿ ಮಹಜರು ಕೂಡ ನಡೆಸಲಾಗಿತ್ತು. ಪ್ರಸ್ತುತ, ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ.


