ಮಂಗಳೂರು; ಅವಿಭಜಿತ ದಕ ಜಿಲ್ಲೆಯ ಕಾಸರಗೋಡು ಮಂಗಳೂರು ಉಡುಪಿ ಕುಂದಾಪುರ ಪುತ್ತೂರು ಬೆಳ್ತಂಗಡಿ ಸುಳ್ಯ ಬಂಟ್ವಾಳ ಪ್ರದೇಶ ಪ್ರಥಮ ಎಂಬಿಬಿಎಸ್ ವೈದ್ಯ, ಕುಟುಂಬ ವೈದ್ಯರಾದ ಡಾ ಕುಳಾಯಿ ರಾಘವೇಂದ್ರ ಕಿಣಿ ( ಡಾ ಕೆ ಆರ್ ಕಿಣಿ) ಸುಮಾರು ನೂರು ವರ್ಷಗಳ ಹಿಂದೆ 1920 ರಲ್ಲೇ ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ಮುಗಿಸಿ ಮಂಗಳೂರಲ್ಲಿ ಕುಟುಂಬ ವೈದ್ಯರಾಗಿ ಕುದುರೆ ಗಾಡಿಯಲ್ಲಿ ಮನೆ ಮನೆಗೆ ಹೋಗಿ ರೋಗಿಗಳನ್ನು ನೋಡಿ ಸಂತೈಷಿ ಚಿಕಿತ್ಸೆ ಕೊಡುತ್ತಿದ್ದರು. ಆವಾಗಲೇ ಮಂಗಳೂರಲ್ಲಿ ವೈದ್ಯರ ಸಂಘ ಹುಟ್ಟು ಹಾಕಿದ್ದರು. ಅವರ ಅಂದಿನ ಆ ಸೇವಾ ನೆನಪಿಗೆ ಇಂದು ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಆಶ್ರಯದಲ್ಲಿ ಡಾ ಕೆ ಆರ್ ಕಿಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕುಟುಂಬ ವೈದ್ಯ, ನೋವು ಹಾಗು ಉಪಶಾಮಕ ವೈದ್ಯಕೀಯ ತಜ್ಞ, ಶಿಕ್ಷಕ ಸಾಹಿತಿ ಸಂಘಟಕ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ದತ್ತಿ ಉಪನ್ಯಾಸ ನೀಡಿದರು.
ಇಡಿ ವಿಶ್ವದ ಆರೋಗ್ಯ ಸೇವೆಯ ಕೇಂದ್ರ ಬಿಂದು ಕುಟುಂಬ ವೈದ್ಯರು, ಅವರ ಸೇವೆ ತ್ಯಾಗ ಹಾಗೂ ಸಮಯೋಚಿತ ಸ್ಪಂದನೆಯಿಂದ ದ್ವೀತಿಯ ಹಾಗು ತೃತೀಯ ಹಂತದ ವೈದ್ಯಕೀಯ ಸೇವೆಗಳು ನೀಡಲ್ಪಡುತ್ತವೆ. ಒಂದಷ್ಟು ಸಮಯ ಎಂಬಿಬಿಎಸ್ ವೈದ್ಯರು ಹಿನ್ನಡೆ ಕಂಡಿದ್ದರೂ ಸಹಾ ಪುನ ಕುಟುಂಬ ವೈದ್ಯರು ಮೇಲುಗೈ ಪಡೆಯಲಿದ್ದಾರೆ. ಅದಕ್ಕೆ ಇಂದಿನ ಯುವ ವೈದ್ಯರನ್ನ ಮೆಡಿಕಲ್ ಕಾಲೇಜು ಗಳಲ್ಲಿ ತಯಾರಿ ಮಾಡಿ ಸಮಾಜಮುಖಿ ಸೇವೆ ಮಾಡಲು ಪ್ರೇರೇಪಿಸಬೇಕು. ಬರಿ ಎಂಬಿಬಿಎಸ್ ವೈದ್ಯ ಎಲ್ಲಾ ವರ್ಗದ ರೋಗಿಗಳನ್ನ ನೋಡಿ ಚಿಕಿತ್ಸೆ ಮಾಡಬಲ್ಲ ಎಂಬುದಕ್ಕೆ ಡಾ ಕೆ ಆರ್ ಕಿಣಿ ಓರ್ವರು ಮಾದರಿ ವೈದ್ಯರು ಎಂದರು. ಎಂಬಿಬಿಎಸ್ ವೈದ್ಯ ಅಂದ್ರೆ ಏನೂ ಅಲ್ಲ ಎಂಡಿ ಬೇಕು ಡಿಎಮ್ ಬೇಕು ಎಂಬ ಭ್ರಮೆಯ ಹಿಂದೆ ಬಿದ್ದು ಎಂಬಿಬಿಎಸ್ ವೈದ್ಯರನ್ನ ಕುಟುಂಬ ವೈದ್ಯರನ್ನ ಕಡೆಗಣಿಸಿದ್ದರಿಂದಾಗಿ ವೈದ್ಯಕೀಯ ಸೇವಾ ಶುಲ್ಕ ದುಪ್ಪಟ್ಟಾಗಿದೆ. ವಿದೇಶಗಳಲ್ಲಿ ಇರುವಂತೆ ಮತ್ತೊಮ್ಮೆ ಕುಟುಂಬ ವೈದ್ಯರು ಅನಿವಾರ್ಯ ಆಗುವ ಕಾಲಘಟ್ಟ ಬರುವ ಎಲ್ಲಾ ಲಕ್ಷಣಗಳು ಆರೋಗ್ಯ ಕ್ಷೇತ್ರದಲ್ಲಿ ಕಾಣಿಸುತ್ತದೆ ಎಂದು ಡಾ ಕುಲಾಲ್ ವೈದ್ಯ ಸಮುದಾಯಕ್ಕೆ ಹಾಗೂ ನಾಗರಿಕರಿಗೆ ಕರೆ ಕೊಟ್ಟರು.
ಖ್ಯಾತ ಕುಟುಂಬ ವೈದ್ಯ, ಧೀಮಂತ ವೈದ್ಯ ನಾಯಕ,ವೈದ್ಯ ಸಂಘಟನೆಯನ್ನು ನೂರು ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ ಡಾ ಕೆ ಆರ್ ಕಿಣಿ ಯವರ ಸಂಸ್ಮರಣೆಯ ದತ್ತಿ ಉಪನ್ಯಾಸಕ್ಕೆ ನನ್ನನ್ನ ಆರಿಸಿ ಗೌರವಿಸಿದ್ದು ನನ್ನ ಭಾಗ್ಯ. ಇದು ನನ್ನ ವೈದ್ಯ ವೃತ್ತಿ ,ಸಂಘಟನೆ ಹಾಗು ನಾಯಕತ್ವ ಸೇವೆಗೆ ಸಂದ ಅತೀ ದೊಡ್ಡ ಗೌರವ. ಇದಕ್ಕೆ ಅವಿಭಜಿತ ದಕ ಜಿಲ್ಲೆಯ ಎಲ್ಲಾ ವೈದ್ಯರು, ಹಾಗು ಆರೋಗ್ಯ ಕಾರ್ಯಕರ್ತರಿಗೆ ನಾನು ಚಿರ ಋಣಿ ಎಂದು ವಂದನೆ ಸಲ್ಲಿಸಿದರು.





