ಬೆಂಗಳೂರು, ನ. 6: ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ರಾಜ್ಯ ಸರ್ಕಾರವನ್ನು ಗೊಂದಲ ಸಿಲುಕಿಸಿದೆ.



ಹೌದು…ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ನಿನ್ನೆ (ನವೆಂಬರ್ 05) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಎಸ್ಐಆರ್ ಪೂರ್ವ ಮತಪಟ್ಟಿ ಬಳಸಬೇಕೋ ಅಥವಾ SIR ಬಳಿಕದ ಪಟ್ಟಿ ಬಳಸಬೇಕೋ ಎನ್ನುವ ಗೊಂದಲಕ್ಕೀಡಾಗಿದೆ. ಈ ವೇಳೆ ಆಯೋಗ ನಿರ್ಧರಿಸಲಿ ಎಂದು ಕೆಲ ಸಚಿವರಿಂದ ಸಲಹೆ ನೀಡಿದ್ದರೆ, ಇನ್ನು ಕೆಲವರು, ಬೇರೆ ರಾಜ್ಯಗಳಲ್ಲಾದಂಥ ಲೋಪಗಳು ನಮ್ಮಲ್ಲಿ ಆಗಿಲ್ಲ. ಹಾಗಾಗಿ ಹೊಸ ಮತಪಟ್ಟಿ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಹೀಗೆ ಚರ್ಚೆಯಾದರೂ ಅಂತಿಮವಾಗಿ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಅಂತಿಮವಾಗಿ ಯಾವ ಪಟ್ಟಿ ಆಧರಿಸಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಗೊಂದಲ ಮುಂದುವರೆದಿದೆ.


