ಕುಕ್ಕೇಡಿ: ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಗುರುವಾಯನಕೆರೆ ತಾಲೂಕಿನ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾದ ಉಚಿತ “ಆರೋಗ್ಯ ತಪಾಸಣಾ ಶಿಬಿರ”ವು ಕುಕ್ಕೇಡಿಯ ಅಂಬೇಡ್ಕರ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೆಡಿ ಅವರು ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ಧರ್ಮಸ್ಥಳ ಯೋಜನೆಯು ಹಮ್ಮಿಕೊಳ್ಳುತ್ತಿರುವ ಇಂತಹ ಉಚಿತ ಶಿಬಿರಗಳು ಅತ್ಯಂತ ಶ್ಲಾಘನೀಯ ಎಂದು ಶುಭಹಾರೈಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಅಶೋಕ್ ಪಾಣೂರು, ಪ್ರಾಂಶುಪಾಲರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್., ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಿರ್ಮಲ್ ಕುಮಾರ್ ಜೈನ್, ತಾಲೂಕು ಯೋಜನಾಧಿಕಾರಿ ಹರೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಅನಿತಾ ಎಂ., ಆನಂದ್ ಭಜನಾ ಮಂಡಳಿಯ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರುಗಳಾದ ಕರುಣಾಕರ, ಪದ್ಮನಾಭ, ಪ್ರಕಾಶ್, ಹೆಲ್ತ್ ಕೇರ್ ರಿಲೇಶನ್ ಹೆಡ್ ಉಮೇಶ್ ಗೌಡ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಸೇವಾಪ್ರತಿನಿಧಿಗಳಾದ ವಿನಯ, ರೇಷ್ಮಾ ಮತ್ತು ಹೇಮಲತಾ ಉಪಸ್ಥಿತರಿದ್ದರು.
ತಜ್ಞ ವೈದ್ಯರ ತಂಡದಿಂದ ತಪಾಸಣೆ:
ಶಿಬಿರದಲ್ಲಿ ಆಳ್ವಾಸ್ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳ ತಂಡ ಸಾರ್ವಜನಿಕರಿಗೆ ವೈದ್ಯಕೀಯ ತಪಾಸಣೆ ಹಾಗೂ ಸೂಕ್ತ ಸಲಹೆಗಳನ್ನು ನೀಡಿತು.
ಡಾ| ದೀತೇಶ್ ಎಂ. (ಹೃದಯ ರೋಗ ತಜ್ಞರು)
ಡಾ| ರಾಜೇಶ್ ಹವಾಲ್ದಾರ್ (ಇ.ಎನ್.ಟಿ. / ಕಿವಿ, ಮೂಗು, ಗಂಟಲು ತಜ್ಞರು)
ಡಾ| ಶ್ರೀಹರಿ ಶೆಟ್ಟಿ (ನೇತ್ರ ತಜ್ಞರು)
ಡಾ| ವಿನಯ್ ಶರ್ಲೇಕರ್ (ಎಲುಬು ಮತ್ತು ಕೀಲು ತಜ್ಞರು)
ಡಾ| ಶಂಕರ್ ಪ್ರಸಾದ್ (ಜನರಲ್ ತಜ್ಞರು)
ಡಾ| ಪೃಥ್ವಿ ಭಟ್ (ಜನರಲ್ ಫಿಜಿಷಿಯನ್)
ಕಾರ್ಯಕ್ರಮದ ನಿರ್ವಹಣೆ:
ವಲಯ ಮೇಲ್ವಿಚಾರಕರಾದ ಯಶೋಧ ಅವರು ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ರವಿಕಲಾ ಅವರು ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ವನಿತಾ ಅವರು ಧನ್ಯವಾದ ಸಮರ್ಪಿಸಿದರು.
ಶಿಬಿರದಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು.




