ಮಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಂಗಳೂರಿನ ಉದ್ಯಮಿ, ಸಂಘಟಕ ಲ. ಅನಿಲ್ದಾಸ್ ಅವರು ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಎಂಟು ವರುಷಗಳಿಂದ ಟಿ. ಎ. ನಾರಾಯಣ ಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಕ್ರಿಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯಲ್ಲಿ ಕನ್ನಡ ಪರ ಹೋರಾಟ ಹಾಗೂ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ತನ್ನದೇ ರೀತಿಯಲ್ಲಿ ಹಲವಾರು ಕೂಡುಗೆಗಳನ್ನು ನೀಡುತ್ತಾ ಬಂದಿರುತ್ತೇನೆ.


ಕಾರ್ಯಕರ್ತರನ್ನು ಒಟ್ಟುಗೂಡಿಸಿ ಕನ್ನಡ ನಾಡು ನುಡಿ ವಿಚಾರಗಳಲ್ಲಿ ಹೋರಾಟಗಳನ್ನು ಸಂಘಟಿಸಿ ಜಿಲ್ಲೆಯಲ್ಲಿ ಸಂಘಟನೆ ಕಷ್ಟ ಅನ್ನುವ ಸಂದರ್ಭದಲ್ಲಿಯೂ ಸಂಘಟನೆಯನ್ನು ಬಲಗೊಳಿಸಲು ತನ್ನ ಶ್ರಮವನ್ನು ವಹಿಸಿ, ತುಳುನಾಡಿನಲ್ಲಿ ಕನ್ನಡ ಸಂಘಟನೆ ಕಷ್ಟ ಅನ್ನುವ ಸಂದರ್ಭದಲ್ಲಿ ತನ್ನ ತನು ಮನ ಧನದಿಂದ ಸಂಘಟನೆ ಸದೃಢಗೊಳಿಸಲು ಶಮ ಪಟ್ಟಿದ್ದೇನೆ. ತನ್ನದೇ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಖರ್ಚು ವೆಚ್ಚಗಳನ್ನು ತನ್ನ ಮೂಲಕ ಭರಿಸಿ.ಬೆಂಗಳೂರು ಕೇಂದ್ರ ಕಚೇರಿಗೂ..
ಆರ್ಥಿಕ ಸಹಾಯ ಕೇಳಿ ಬಂದಾಗ ಸ್ಪಂದಿಸಿ ಬೆಂಗಳೂರಿನ ಕಾರ್ಯಕ್ರಮಗಳಿಗೆ ಆದಷ್ಟು ದಾನಿಗಳ ಮುಖಾಂತರ ನೆರವನ್ನು ಒದಗಿಸುವ ಮೂಲಕ, ಇದುವರೆಗೆ ತನ್ನ ನಿಷ್ಠೆಯನ್ನು ಮುಂದುವರೆಸಿಕೊಂಡು ಹೋದ ಬಳಿಕ, ಇನ್ನು ಸಂಘಟನೆಯಲ್ಲಿ ಮುಂದುವರೆಯಲು ಅಸಾಧ್ಯ ಎಂದು ಮನಗಂಡು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.



