ಉಡುಪಿ: ಕಂಬಳದ ಕರೆಯಲ್ಲಿ ತನ್ನ ಬಿರುಗಾಳಿಯಂತಹ ಓಟದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದ, ಉಡುಪಿ ಜಿಲ್ಲೆಯ ನಂದಳಿಕೆಯ ಪ್ರಸಿದ್ಧ ಕಂಬಳದ ಕೋಣ ‘ಪಾಂಡು’ ಅನಾರೋಗ್ಯದಿಂದ ಸೆಪ್ಟೆಂಬರ್ 28ರ ಮುಂಜಾನೆ ಕೊನೆಯುಸಿರೆಳೆದಿದೆ.
ನಂದಳಿಕೆ ಶ್ರೀಕಾಂತ್ ಭಟ್ ಅವರ ಕುಟುಂಬದ ಪ್ರೀತಿಯ ಸದಸ್ಯನಂತಿದ್ದ ಪಾಂಡು, ಸತತ 8 ವರ್ಷಗಳ ಕಾಲ ಅಪ್ರತಿಮ ಚಾಂಪಿಯನ್ ಆಗಿ ಮೆರೆದು 150ಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಜಾನಪದ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಐತಿಹಾಸಿಕ ಛಾಪು ಮೂಡಿಸಿದ್ದ ಈ ಸಾಹಸಿ ಕೋಣದ ಅಗಲುವಿಕೆ, ಕಂಬಳಾಭಿಮಾನಿಗಳಿಗೆ ಹಾಗೂ ಮಾಲೀಕರಿಗೆ ತೀವ್ರ ದುಃಖ ತಂದಿಟ್ಟಿದೆ





