ವೇಣೂರು: ಹುಟ್ಟು ಚಳುವಳಿಯ ಮುಖೇನ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ರಾಜಕೀಯ ಪ್ರವೇಶ ಮಾಡಿ ಜನಪರ ಕೆಲಸಗಳನ್ನು ಕೈಗೊಂಡ ಜನನಾಯಕ ಶೇಖರ್ ಕುಕ್ಕೇಡಿಯವರ ದಲಿತ ಸಮಾಜದ ಬೇಡಿಕೆಗಳಾದ ಡಿಸಿ ಮನ್ನಾ ಭೂಮಿ ಹಾಗೂ ಆದಿದ್ರಾವಿಡ ಮೂಲಸ್ಥಾನ ಅಲೇರಿಯ ಜೀರ್ಣೋದ್ಧಾರಕ್ಕೆ ಅನುದಾನಕ್ಕೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಜಯಂತ್ ಕೋಟ್ಯಾನ್ ಕುಕ್ಕೇಡಿ ಆಗ್ರಹಿಸಿದ್ದಾರೆ.


ಇವೆರಡನ್ನು ಕಾಂಗೆಸ್ ಪಕ್ಷವು ಮನಗೊಂಡು ತಕ್ಷಣವೇ ಭೂಮಿ ಹಾಗೂ ಜೀರ್ಣೋದ್ಧಾರಕ್ಕೆ ಅನುದಾನವನ್ನು ಮಂಜೂರು ಮಾಡಬೇಕು, ಪಕ್ಷಕ್ಕೆ ಇವರ ಅಗತ್ಯತೆ ಹಾಗೂ ಅನಿವಾರ್ಯತೆ ಇರುವುದರಿಂದ ಪಕ್ಷದ ವರಿಷ್ಠರು ಕೂಲಂಕುಷವಾಗಿ ಚರ್ಚಿಸಿ ಇವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಅವರು ತಿಳಿಸಿದ್ದಾರೆ.



