ಗುಜರಾತ್, ಸೆ. 23 : ರಾಜ್ಯದ ಏಕ್ತಾ ನಗರದಲ್ಲಿ ಜರುಗಿದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.


ಕನ್ನಡ ಹಾಗೂ ತುಳು ಚಿತ್ರರಂಗದ ಪ್ರತಿಭೆಗಳಿಗೆ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಪಿಕ್ಚರ್ಸ್’ ಮತ್ತು ಖ್ಯಾತ ‘ಕೆಆರ್ಜಿ ಸ್ಟುಡಿಯೋಸ್’ ಜಂಟಿ ನಿರ್ಮಾಣದ ‘ಮಿಥ್ಯ’ ಸಿನಿಮಾ ಮೂರು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿತು.
ಸುಮಂತ್ ಭಟ್ ಕಥೆ ಬರೆದು ನಿರ್ದೇಶಿಸಿರುವ ‘ಮಿಥ್ಯ’ ಚಿತ್ರದಲ್ಲಿನ ನಟನೆಗಾಗಿ ಬಾಲನಟ ಅತೀಶ್ ಎಸ್. ಶೆಟ್ಟಿಅತ್ಯುತ್ತಮ ಬಾಲ ಕಲಾವಿದ’ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದೇ ರೀತಿ ಚಿತ್ರದಲ್ಲಿನ ಭಾವಪೂರ್ಣ ಅಭಿನಯಕ್ಕಾಗಿ ರೂಪಶ್ರೀ ವರ್ಕಾಡಿ ಅವರು ‘ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಪಡೆದುಕೊಂಡರು. ಚಿತ್ರದಲ್ಲಿ ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.



