ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮೂಹಿಕ ಲಕ್ಷ್ಮೀಪೂಜೆಯ ಪ್ರಯುಕ್ತ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಆಶಯದಂತೆ ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಿಸಲಿದ್ದೇವೆ ಎಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ.) ಗುರುವಾಯನಕೆರೆ ಇದರ ಗೌರವಾಧ್ಯಕ್ಷರಾದ ಹರೀಶ್ ಕಾರಿಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಯನ್ನು ಸಮರ್ಪಣೆ ಮಾಡುವ ಭಕ್ತರು ಇದೇ ತಿಂಗಳ ದಿನಾಂಕ 16 ರಿಂದ 19ರ ಒಳಗಡೆ ಕುಲಾಲ ಮಂದಿರದಲ್ಲಿ ತಂದು ಒಪ್ಪಿಸುವಂತೆ ಅವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಭಾರ ಅಧ್ಯಕ್ಷರಾದ ಯಾದವ ಮುಂಡೂರು, ಕಾರ್ಯದರ್ಶಿ ಸುಧೀರ್ ಕೆ. ಎನ್ ಸದಸ್ಯರುಗಳಾದ ಯತೀಶ್ ಸಿರಿಮಜಲ್, ಲೋಕೇಶ್ ಕುಲಾಲ್, ಅವಿನಾಶ್ ಮಾಣೂರು, ತಿಲಕ್ ರಾಜ್ ಕುಲಾಲ್, ಉಮೇಶ್ ಕುಲಾಲ್, ದಿನೇಶ್ ಕೊಂಡೆಮಾರ್, ಗಂಗಾಧರ ಕುಲಾಲ್, ತಾರಾನಾಥ ಕುಲಾಲ್ ಹನೈನಡೆ ಹಾಗೂ ಸಂಘದ ಮೆನೇಜರ್ ಮುಖೇಶ್ ಕುಲಾಲ್ ಇವರನ್ನು ಸಂಪರ್ಕಿಸಬಹುದಾಗಿದೆ.


ಕರ್ಮಯೋಗಿ, ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಯವರ ಮಾರ್ಗದರ್ಶನ ಮತ್ತು ಶುಭಶೀರ್ವಾದಗಳೊಂದಿಗೆ 27ನೇ ವರ್ಷದ ಶ್ರೀ ಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವೃತಚಾರಣೆ ಕಾರ್ಯಕ್ರಮವು ಸುದೀರ್ಘ 48 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ತಿಂಗಳ 28ರಂದು ಸಂಪನ್ನಗೊಳ್ಳಲಿದೆ.



