ವೇಣೂರು: ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ವಲಯ ಇದರ ಮಹಾಸಭೆಯಲ್ಲಿ 2026-27 ಹಾಗೂ 2027 28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ ಹಂದೇವು ಕಾರ್ಯದರ್ಶಿಯಾಗಿ ಅರುಣ ದೇವಾಡಿಗ ಪಾರೊಟ್ಟು ಆಯ್ಕೆಯಾಗಿರುತ್ತಾರೆ.


ಗೌರವಾಧ್ಯಕ್ಷರಾಗಿ ಶ್ರೀನ ದೇವಾಡಿಗ ಪದ್ಮೇಲು, ಉಪಾಧ್ಯಕ್ಷರಾಗಿ ಉಮೇಶ್ ದೇವಾಡಿಗ ಕೆರೆಕೋಡಿ, ಕೋಶಾಧಿಕಾರಿಯಾಗಿ ಆನಂದ ದೇವಾಡಿಗ ಪಾಣೂರು , ಜೊತೆ ಕಾರ್ಯದರ್ಶಿಯಾಗಿ ವಿಠಲ ದೇವಾಡಿಗ ಬುಳೆಕ್ಕಾರ ಆಯ್ಕೆಯಾಗಿರುತ್ತಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್ ದೇವಾಡಿಗ ವೇಣೂರು, ಪ್ರಶಾಂತ ದೇವಾಡಿಗ ನಡುಕುಮೇರು, ಅಶೋಕ್ ಜಿ ಅಂಡಿಂಜೆ, ಸಚಿನ್ ದೇವಾಡಿಗ ಲಿಂಗದೊಡಿ, ವಿಶ್ವನಾಥ ದೇವಾಡಿಗ ನಂದಿಬೆಟ್ಟ, ಪುನೀತ್ ದೇವಾಡಿಗ ಬೊಳ್ಳಾಜೆ, ಗಣೇಶ್ ದೇವಾಡಿಗ ನೀರಪಲ್ಕೆ, ರಂಜನ್ ದೇವಾಡಿಗ ಪಡ್ಡoದಡ್ಕ, ಶ್ರೀಮತಿ ಸವಿತಾ ವಿನೋದ್ ಎರ್ಮೋಡಿ, ಶ್ರೀಮತಿ ಸರಿತಾ ರಾಜೇಶ್ ಕಾಂಜರಕಟ್ಟ ಆಯ್ಕೆಯಾಗಿರುತ್ತಾರೆ.
ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಗೋಳಿತ್ಯಾರು, ಕಾರ್ಯದರ್ಶಿಯಾಗಿ ಶ್ರೀಮತಿ ಸುಮಾ ಬಾಲಕೃಷ್ಣ ಪಾರೋಟ್ಟು ಆಯ್ಕೆಯಾಗಿರುತ್ತಾರೆ.



