ಭಾರತದ ಪ್ರಧಾನಿ ನರೇಂದ್ರ ಮೋದಿ ಕ್ರೇಜ್ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಅನುಯಾಯಿಗಳ ಸಂಖ್ಯೆ ಕೆಲವೇ ನಿಮಿಷಗಳಲ್ಲಿ ಗಗನಕ್ಕೇರಿದೆ. ಕೇವಲ 12 ಗಂಟೆಗಳಲ್ಲಿ ಮೋದಿ ಅವರ ಇನ್ಸ್ಟಾಗ್ರಾಂ ಖಾತೆಗೆ 1.1 ಮಿಲಿಯನ್ ಅನುಯಾಯಿಗಳು ಹೆಚ್ಚಾಗಿದ್ದಾರೆ. ಗುರುವಾರ ಮಧ್ಯರಾತ್ರಿ ಪ್ರಧಾನಿ ಮೋದಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಪ್ರಮುಖ ಘೋಷಣೆ ಮಾಡಿದ್ದರು. ಅವರ ಈ ಸೆಲ್ಫೀ ವಿಡಿಯೋ ಬಳಿಕ ಫಾಲೋವರ್ಗಳ ಸಂಖ್ಯೆ ಭಾರೀ ಹೆಚ್ಚಾಗಿದೆ.

ಪೇಪರ್ ಲೀಕ್ ವಿರುದ್ಧ ಕಠಿಣ ಕಾನೂನುಗಳು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ಸ್ಥಾಪನೆಯ ಕುರಿತು ಪ್ರಕಟಿಸಿದ ಈ ವಿಡಿಯೋ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಅವರ ಇನ್ಸ್ಟಾಗ್ರಾಮ್ ಖಾತೆಗೆ ಲಕ್ಷಾಂತರ ಜನ ಹೊಸ ಫಾಲೋವರ್ಸ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರ ಒಟ್ಟು ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 102 ಮಿಲಿಯನ್ಗೆ ತಲುಪಿದೆ.



