ಬಾಲಿವುಡ್ನ ವಿವಾದಗಳ ರಾಣಿ ಎಂದೇ ಫುಲ್ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಅವರು ತಮ್ಮ ವಿಲಕ್ಷಣ ಮತ್ತು ಅಸಹಜ ನಡವಳಿಕೆಗಳಿಂದ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇವರು ಎಲ್ಲಿ, ಯಾವ ಸಮಯದಲ್ಲಿ, ಯಾವ ರೀತಿಯಾಗಿ ವರ್ತಿಸಿ ಜನರ ಗಮನ ಸೆಳೆಯುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸುವುದು ಸಾಧ್ಯವಿಲ್ಲ. ಇದೀಗ ಅವರ ಮತ್ತೊಂದು ಶಾಕಿಂಗ್ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರ ಈ ನಡೆ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಇತ್ತೀಚೆಗೆ ನಡೆದ ‘ರುಬಾರು ಮಿಸ್ಟರ್ ಇಂಡಿಯಾ 2026’ಕಾರ್ಯಕ್ರಮವೊಂದರಲ್ಲಿ ನಟಿ ರಾಖಿ ಸಾವಂತ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕೆಂಪು ಬಣ್ಣದ ಜಂಪ್ಸೂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದ ಅವರು, ಹೊಸ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕ್ಯಾಮೆರಾಗಳ ಮುಂದೆ ಫೋಸ್ ನೀಡುವಾಗ ಅವರು ಮಾಡಿದ್ದೇ ಬೇರೆ ನೋಡಿ.
ಇದ್ದಕ್ಕಿದ್ದಂತೆ ತಾವು ಧರಿಸದ್ದ ಪ್ಯಾಂಟ್ ಒಳಗಿನಿಂದ ರಕ್ತಸಿಕ್ತವಾಗಿರುವಂತೆ ಕಾಣುತ್ತಿರುವ ಉದ್ದನೆಯ ಸ್ಯಾನಿಟರಿ ಪ್ಯಾಡ್ ಒಂದನ್ನು ಹೊರತೆಗೆದು ಎಲ್ಲರ ಮುಂದೆ ಪ್ರದರ್ಶಿಸಿದರು. ನಂತರ ಕೆಲಕಾಲ ಅದನ್ನು ಹಿಡಿದು ನಿಂತ ಅವರು, “ವಿದ್ಯಾರ್ಥಿನಿಯರನ್ನ ಹೊಡೆಯುತ್ತಿದ್ದಾರೆ, ಅವರನ್ನು ಹಿಂಸಿಸುತ್ತಿದ್ದಾರೆ, ನಾನು ನನ್ನ ಪೀರಿಯಡ್ಸ್ ಪ್ಯಾಡ್ ಅನ್ನು ಅವರ ಮುಖಕ್ಕೆ ಎಸೆಯುತ್ತಿದ್ದೇನೆ.” ಎಂದು ಅದನ್ನು ಅಲ್ಲಿದ್ದ ಮೈಕ್ಗಳ ಮೇಲೆಯೇ ಎಸೆದು ಅಲ್ಲಿಂದ ಹೊರಟುಹೋದರು.
ಅದು ನಿಜವಾದ ಋತುಚಕ್ರದ ರಕ್ತವೇ?
ರಾಖಿ ಪ್ರದರ್ಶಿಸಿದ ಈ ಪ್ಯಾಡ್ನಲ್ಲಿರುವ ರಕ್ತವನ್ನು ನೋಡಿದರೆ, ಅದು ನಿಜವಾದ ಋತುಚಕ್ರದ ರಕ್ತದಂತೆ ಕಾಣುತ್ತಿಲ್ಲ. ಬದಲಿಗೆ ಕೆಂಪು ಬಣ್ಣ ಅಥವಾ ಪೇಂಟ್ ಸುರಿದಂತೆ ಕಾಣುತ್ತದೆ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಈ ಉದ್ದನೆಯ ಮತ್ತು ದಪ್ಪನೆಯ ಪ್ಯಾಡ್ಗಳನ್ನ ಬಳಸುವವರ ಸಂಖ್ಯೆ ಭಾರಿ ಕಡಿಮೆ. ಅದರಲ್ಲೂ ಸಿನಿಮಾ ತಾರೆಯರು ಇಂತಹ ಪ್ಯಾಡ್ಗಳನ್ನ ಬಳಸುವ ಸಾಧ್ಯತೆ ತುಂಬಾ ಕಡಿಮೆ. ಇದು ಕೇವಲ ಪ್ರಚಾರಕ್ಕಾಗಿ ಮತ್ತು ವಿವಾದ ಸೃಷ್ಟಿಸಿ ಸುದ್ದಿಯಲ್ಲಿರಲು ಅವರು ಮಾಡಿದ ಅಗ್ಗದ ಗಿಮಿಕ್ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ರಾಖಿ ಸಾವಂತ್ ಅವರ ಈ ವರ್ತನೆಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಅವರ ಈ ವರ್ತನೆಯನ್ನ ಅಸಹ್ಯಕರ ಮತ್ತು ಅಮಾನವೀಯ ಎಂದು ಟೀಕಿಸುತ್ತಿದ್ದಾರೆ.
ಈ ವಿಡಿಯೋಗೆ ಬಂದಿರುವ ಕೆಲವು ಕಮೆಂಟ್ಗಳು ಹೀಗಿದೆ ನೋಡಿ
“ಇದು ನಿಜವಾದ ರಕ್ತದಂತೆ ಕಾಣುತ್ತಿಲ್ಲ, ಟೊಮೆಟೊ ಕೆಚಪ್ ಸುರಿದಂತೆ ಕಾಣುತ್ತಿದೆ.”
“ಇವಳಿಗೆ ಏನಾಗಿದೆ? ಕೇವಲ ಪ್ರಚಾರಕ್ಕಾಗಿ ಎಷ್ಟರಮಟ್ಟಿಗೆ ಬೇಕಾದರೂ ಕೆಳಮಟ್ಟಕ್ಕೆ ಇಳಿಯುತ್ತಾಳಲ್ಲ, ನಾಚಿಕೆಯಾಗಬೇಕು.”
“ಮಹಿಳೆಯರ ಋತುಚಕ್ರದಂತಹ ಸೂಕ್ಷ್ಮ ವಿಚಾರವನ್ನು ಈ ರೀತಿ ಅಣಕಿಸುವುದು ಸರಿಯಲ್ಲ, ಇವಳ ವಿರುದ್ಧ ಕ್ರಮ ಕೈಗೊಳ್ಳಬೇಕು.”
“ಇವಳನ್ನ ಯಾವುದಾದರೂ ಒಳ್ಳೆಯ ಮಾನಸಿಕ ಆಸ್ಪತ್ರೆಗೆ ಸೇರಿಸಿ, ಇವಳಿಗೆ ಚಿಕಿತ್ಸೆಯ ಅಗತ್ಯವಿದೆ.”
“ಕ್ಯಾಮೆರಾ ಮುಂದೆ ಇಷ್ಟೆಲ್ಲಾ ನಾಟಕ ಮಾಡುವ ಇವಳನ್ನ ಕಾರ್ಯಕ್ರಮಗಳಿಗೆ ಕರೆಯುವವರಿಗೂ ಬುದ್ಧಿಯಿಲ್ಲ.”
ಒಟ್ಟಿನಲ್ಲಿ, ಯಾವಾಗಲೂ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ರಾಖಿ ಸಾವಂತ್, ಈ ಬಾರಿ ಸಾರ್ವಜನಿಕವಾಗಿ ಇಂತಹ ಅಸಹ್ಯಕರ ವರ್ತನೆ ತೋರುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.



