ಬೆಳ್ತಂಗಡಿ: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ಗೆ ತಾಲೂಕಿನ ಹೆಮ್ಮೆಯ ಕಬಡ್ಡಿ ಆಟಗಾರ, ಪಡಂಗಡಿಯ ಸುಶಾಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ವಿಜಯಪುರ ಲಯನ್ಸ್ ತಂಡದಲ್ಲಿ ಸುಶಾಂತ್ ಶೆಟ್ಟಿ ಆಡಲಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ವಿಜಯಪುರ ಲಯನ್ಸ್ ತಂಡದಲ್ಲಿ ಸುಶಾಂತ್ ಶೆಟ್ಟಿ ಆಡಲಿದ್ದಾರೆ.
ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಸುಂದರ ಶೆಟ್ಟಿ ಹಾಗೂ ಸುರೇಖಾ ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ. ಕಬಡ್ಡಿ ಕೋಚ್ ಕೃಷ್ಣಾನಂದ ರಾವ್ ಅವರಿಂದ ಕಬಡ್ಡಿ ತರಭೇತಿ ಪಡೆಯುತ್ತಿದ್ದಾರೆ. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು, ಎಸ್ ಡಿಎಂ ತಂಡದ ಪರವಾಗಿಯೂ ತಮ್ಮ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ.



