ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಸಂಕ್ರಮಣದ ಪ್ರಯುಕ್ತ ಜು. 16ರಂದು ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಸೇವೆ ನಡೆಯಿತು.
ಈ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಸೇವೆಯನ್ನು ಬಜಿರೆ ಜೈನರ ಬಾಡಾರುವಿನ ಪ್ರದೀಪ್ ಹೆಗ್ಡೆ ಮತ್ತು ಮನೆಯವರು ನಡೆಸಿಕೊಟ್ಟಿದ್ದು, ದೇವಸ್ಥಾನದ ವತಿಯಿಂದ ಅವರಿಗೆ ಪ್ರಸಾದ ವಿತರಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಅಶೋಕ್ ಪಾಣೂರು, ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್ ಇದ್ದರು.




