ದಾಸ್ ಪ್ರಮೋಷನ್ಸ್ ಸಂಸ್ಥೆ ಸಮಾಜಮುಖಿಯಾಗಿ ಬೆಸೆದುಕೊಂಡಿದೆ: ಕಟೀಲು ಅಸ್ರಣ್ಣರು
ಮಂಗಳೂರು: ಒಂದು ಸಂಸ್ಥೆಯನ್ನು 25 ವರ್ಷಗಳ ಕಾಲ ಮುನ್ನಡೆಸುವುದು ಸಾಮಾನ್ಯ ವಿಚಾರವಲ್ಲ. ದಾಸ್ ಹೆಸರು ಅತೀ ಪುರಾತನವಾದದ್ದು. ಆ ಹೆಸರಿಗೆ ಧಾರ್ಮಿಕ ಹಿನ್ನೆಲೆ ಇದೆ. ದೇವರ ದಾಸ ಆಗುವುದರ ಜೊತೆ ಸಾವಿರಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿದ ಇವರು ಮನುಷ್ಯನ ದಾಸನಾಗಿರುವುದು ಬಹುದೊಡ್ಡ ಸಾಧನೆ ಆಗಿದೆ. ಈ ಸಂಸ್ಥೆ ಸಮಾಜಮುಖಿಯಾಗಿ ಬೆಸೆದುಕೊಂಡಿದೆ, ಕಟೀಲು ತಾಯಿ ಇವರಿಗೆ ಶ್ರೇಯಸ್ಸು ನೀಡಿ ಆಶೀರ್ವದಿಸಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಅವರು ಮಂಗಳೂರಿನ ಕಂಕನಾಡಿ ಎಂಪೋರಿಯಂ ಕಾಂಪ್ಲೆಕ್ಸ್ನಲ್ಲಿರುವ ದಾಸ್ ಪ್ರಮೋಷನ್ಸ್ ನವೀಕೃತ ಕೇಂದ್ರ ಕಚೇರಿಯ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿಮಾತನಾಡಿದರು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕೇಂದ್ರ ಕಚೇರಿಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.





ತಂತ್ರಜ್ಞಾನ ಯುಗದಲ್ಲೂ ಅನಿವಾರ್ಯದ ಸೇವೆ
ಡೈಲಿವರ್ಲ್ಡ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ನಾಮಫಲಕ ಅನಾವರಣಗೊಳಿಸಿ, ಬಹಳ ಹಿಂದಿನಿಂದಲೂ ಕುಬೇರ ಸ್ಥಾನದಲ್ಲಿದ್ದ ಅನಿಲ್ದಾಸರು ಇಂದೂ ಕೂಡಾ ಅದೇ ಸ್ಥಾನದಲ್ಲಿ ಇದ್ದಾರೆ. ಮುಂದೆಯೂ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು. ಇಂದು ತಂತ್ರಜ್ಞಾನ ಅಭಿವೃದ್ಧಿ ಆಗಿ ಎಲ್ಲವೂ ಡಿಜಿಟಲ್, ಎಐ ಯುಗ ಬಂದಿದೆ. ಆದರೆ ಯಾವುದೇ ತಂತ್ರಜ್ಞಾನಕ್ಕೂ ಬಗ್ಗದ ಉದ್ಯೋಗ ಎಂಬುದು ಇದ್ದರೆ ಅದು ಹೋಮ್ ನರ್ಸಿಂಗ್ ಸೇವೆ. ಹ್ಯೂಮನ್ ಟಚ್ ಮತ್ತು ಪ್ರೀತಿ ನೀಡಿ ರೋಗಿಗಳನ್ನು ಹಾರೈಕೆ ಮಾಡುವ ಕೆಲಸ ಯಾವ ತಂತ್ರಜ್ಞಾನಕ್ಕೂ ಸಾಧ್ಯವಿಲ್ಲ ಎಂದರು.







ಸಂಸ್ಥೆಯ ಸಂಸ್ಥಾಪಕ ಲ. ಅನಿಲ್ದಾಸ್ ಮಾತನಾಡಿ, ದಾಸ್ ಸೇವಾ ಸಂಸ್ಥೆ ಕರ್ನಾಟಕದಾದ್ಯಂತ 11 ಶಾಖೆಗಳ ಮೂಖಾಂತರ ಶುಶ್ರೂಶಕಿಯರನ್ನು ಕಳುಹಿಸಿಕೊಟ್ಟು ಆರೋಗ್ಯಸೇವೆ ನೀಡುತ್ತಿದೆ. ನಮ್ಮ ಈ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಮಾರ್ಗದರ್ಶಕರು, ಹಿತೈಷಿಗಳು, ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಬೆಳಿಗ್ಗೆ ಹಣಹೋಮ, ಮಧ್ಯಾಹ್ನ ಮಹಾಲಕ್ಷ್ಮೀ ಪೂಜೆ ನೆರವೇರಿತು.
ಸನ್ಮಾನ
ಕ್ರೀಡಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಧನಲಕ್ಷ್ಮೀ ಪೂಜಾರಿ ಸಂಸ್ಥೆ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಮೇಶ್ ಪಣೋಲಿಬೈಲು, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಪಂಜಿಕಲ್ಲು, ಬೆಂಗಳೂರಿನ ಉದ್ಯಮಿ ಸೌಂದರ್ಯ ರಮೇಶ್, ಸೆನೆಟ್ ಸದಸ್ಯ ಸುರೇಶ್ ನಾವೂರು, ಬಿಜೆಪಿ ಜಿಲ್ಲಾ ಮುಖಂಡರಾದ ಧನಲಕ್ಷ್ಮೀ ಗಟ್ಟಿ, ಮಹಾಬಲ ಕೊಟ್ಟಾರಿ, ನಾಗೇಂದ್ರ ಕುಮಾರ್, ವಿಶ್ವವಿಖ್ಯಾತ ಜಾದುಗಾರ ಗಣೇಶ್ ಕುದ್ರೋಳಿ, ಡಾ. ಎಂ. ಅಣ್ಣಯ್ಯ ಕುಲಾಲ್, ದಯಾನಂದ ಅಡ್ಯಾರ್, ಜಯರಾಜ್ ಪ್ರಕಾಶ್ ಹಾಗೂ ಮತ್ತಿತರು ಆಗಮಿಸಿದ್ದರು.
ಸಂಸ್ಥೆಯ ಸಂಸ್ಥಾಪಕ ಲ. ಅನಿಲ್ದಾಸ್ ದಂಪತಿ ಎಲ್ಲರನ್ನು ಸ್ವಾಗತಿಸಿ, ಸತ್ಕರಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.



