ಬಂಟ್ವಾಳ: ಮಲರಾಯ ದೈವಸ್ಥಾನದ ಮಲರಾಯ ಗ್ರಾಮಸಮಿತಿ ಮರ್ತಾಜೆಗುತ್ತು ಇದರ ವಾರ್ಷಿಕ ಸಭೆಯು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸತೀಶ್ ಮರ್ತಾಜೆ ಅವರನ್ನು ಆಯ್ಕೆ ಮಾಡಲಾಯಿತು. ಗೌರವಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಶಿವರಾಮ್ ಮರ್ತಾಜೆ, ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಕುಂಪಲ ಮತ್ತು ವಿಶ್ವನಾಥ ಮರ್ತಾಜೆ, ಕೋಶಾಧಿಕಾರಿಯಾಗಿ ಜಯಂತ್ ಪಡೀಲ್ ಅವರು ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಪುನೀತ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಮರ್ತಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಮರ್ತಾಜೆ ಮತ್ತು ಜಯಂತ್ ಮಿತ್ತಕಟ್ಟ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಮರ್ತಾಜೆ ಅವರು ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ರಘುನಾಥ್ ಮರ್ತಾಜೆ, ರಾಜೇಶ್ ಮರ್ತಾಜೆ, ದಿನೇಶ್ ವರಕಾಯಿ, ಜನಾರ್ಧನ ಕಾಪಿಕಾಡ್, ಗಣೇಶ್ ಮರ್ತಾಜೆ ಹಾಗೂ ಸತೀಶ್ ಮರ್ತಾಜೆ ಅವರನ್ನು ನೇಮಿಸಲಾಯಿತು.



