ಆರಂಬೋಡಿ: ಇಲ್ಲಿಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ದಾನಿಗಳು, ಮಕ್ಕಳ ಪೋಷಕರು, ಎಸ್ಡಿಎಂಸಿ ಹಾಗೂ ಗ್ರಾಮ ಪಂಚಾಯತ್ ಸಹಕಾರದಿಂದ ಸುಮಾರು ರೂ. 2.5ಲಕ್ಷ ಮೊತ್ತದ ವಿವಿಧ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ ನಡೆಯಿತು.
ಸಮಾರಂಭದಲ್ಲಿ ದಾನಿಗಳು, ಗ್ರಾ.ಪಂ. ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





